ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ವಾಕ್ಸಿನ್ ಪಡೆಯದಿದ್ರೂ ಸೆಕೆಂಡ್ ಡೋಸ್ ಕಂಪ್ಲಿಟ್ ಸರ್ಟಿಫಿಕೇಟ್ !

ಕುಂದಗೋಳ : ಇದು ಆರೋಗ್ಯ ಇಲಾಖೆ ಯಡವಟ್ಟೋ ಅಥವಾ ಲಸಿಕೆ ನೀಡಿದ್ದೇವೆ ಎಂದು ಅಂಕಿ ಸಂಖ್ಯೆ ತೋರಿಸುವ ಧಾವಂತವೋ ಗೊತ್ತಿಲ್ಲಾ ಇಲ್ಲೋಬ್ರಿಗೆ ಸೆಕೆಂಡ್ ಡೋಸ್ ವ್ಯಾಕ್ಸಿನ್ ಪಡೆಯದಿದ್ರೂ ಸಹ ಲಸಿಕೆ ಪಡೆದಿದ್ದಾರೆ ಎಂದು ಸರ್ಟಿಫಿಕೇಟ್ ಬಂದಿದೆ. ಈ ವಿಷಯ ಅವ್ರು ಸೆಕೆಂಡ್ ಡೋಸ್ ಲಸಿಕೆ ಪಡೆಯಲು ಬಂದಾಗ್ಲೇ ಗೊತ್ತಾಗಿದೆ.

ಕುಂದಗೋಳ ಪಟ್ಟಣದ ಅನುಪಮ ಎಂಬ ವಿದ್ಯಾರ್ಥಿ ಗದಗ ಜಿಲ್ಲೆಯ ರಾಮಗಿರಿ ವ್ಯಾಕ್ಸಿನ್ ಕೇಂದ್ರದಲ್ಲಿ ಮೊದಲ ಡೋಸ್ ವ್ಯಾಕ್ಸಿನ್ ಪಡೆದು ಸೆಕೆಂಡ್ ಡೋಸ್ ಪಡೆಯಲು ಕುಂದಗೋಳ ಪಟ್ಟಣದ ಮರಾಠಾ ಭವನದ ವ್ಯಾಕ್ಸಿನ್ ಕೇಂದ್ರಕ್ಕೆ ಬಂದಿದ್ದಾಳೆ ಈ ಡಾಟಾ ಲಾಗಿನ್ ಮಾಡಿದ ತಕ್ಷಣ ಸೆಕೆಂಡ್ ಡೋಸ್ ಮುಕ್ತಾಯವಾಗಿದೆ ಎಂಬ ಸರ್ಟಿಫಿಕೇಟ್ ನೋಡಿ ಶಾಕ್ ಆಗಿದ್ದಾರೆ.

ಇದಲ್ಲದೆ ಇನ್ನುಳಿದ ಇವರ ಕುಟುಂಬದವರು ಮೊದಲ ಡೋಸ್ ಲಸಿಕೆ ಪಡೆದಿದ್ದು, ಸೆಕೆಂಡ್ ಡೋಸ್ ಲಸಿಕೆ ಪಡೆಯಲು ಇವರ ಡಾಟಾ ಲಾಗಿನ್ ಆಗ್ತಾ ಇಲ್ಲಾ, ಈ ಪರಿಣಾಮ ತಮ್ಮ ಅಗತ್ಯ ಕೆಲಸ ಬಿಟ್ಟು ವ್ಯಾಕ್ಸಿನ್ ಪಡೆಯಲು ಬಂದವರು ಪುನಃ ರಾಮಗಿರಿ ವ್ಯಾಕ್ಸಿನ್ ಕೇಂದ್ರಕ್ಕೆ ತೆರಳುವಂತ್ತಾಗಿದೆ.

ಈ ಬಗ್ಗೆ ಸಂಬಂಧಪಟ್ಟ ಆರೋಗ್ಯ ಇಲಾಖೆ ಅಧಿಕಾರಿಗಳೇ ಗಮನಿಸಿ ಇದೆ ಪರಿಸ್ಥಿತಿ ಅನಕ್ಷರಸ್ಥರು, ವಯೋವೃದ್ಧರು, ಅಂಗವಿಕಲರಿಗೆ ಉಂಟಾದ್ರೇ ಏನು ಮಾಡೋದು ಕೊಂಚ ಗಮನಿಸಿ.

Edited By : Shivu K
Kshetra Samachara

Kshetra Samachara

22/09/2021 02:35 pm

Cinque Terre

97.43 K

Cinque Terre

4

ಸಂಬಂಧಿತ ಸುದ್ದಿ