ಕುಂದಗೋಳ : "ಹೋದೆಯಾ ಪಿಶಾಚಿ ಅಂದ್ರೆ, ಬಂದೆಯಾ ಗವಾಕ್ಷಿಯಲ್ಲಿ" ಎಂಬಂತೆ ಮಹಾಮಾರಿ ಕೊರೊನಾದ ಎರಡು ಪ್ರಕರಣ ಕುಂದಗೋಳದಲ್ಲಿ ಪತ್ತೆಯಾಗಿವೆ.
ತಾಲೂಕು ಆಸ್ಪತ್ರೆ ಕೈಗೊಂಡ ʼಆರೋಗ್ಯ ಕಾಳಜಿ, ಅತಿ ಹೆಚ್ಚಿನ ಲಸಿಕಾ ಅಭಿಯಾನ...ʼ ಕೊರೊನಾ ವೈರಸ್ ಹರಡುವಿಕೆಗೆ ತಡೆಯೊಡ್ಡಿತ್ತು. ಇದೀಗ ಕುಂದಗೋಳ ಪಟ್ಟಣದಲ್ಲೇ ಎರಡು ಕೋವಿಡ್ ಹೊಸ ಪ್ರಕರಣಗಳು ಅನಾವರಣಗೊಂಡಿರುವುದು ಮತ್ತೊಮ್ಮೆ ಮಾಸ್ಕ್, ಸಾಮಾಜಿಕ ಅಂತರ ಹಾಗೂ ಸ್ಯಾನಿಟೈಸರ್ ಬಳಕೆಯ ಜಾಗೃತಿ ಸಾರಿದೆ.
ಈಗಾಗಲೇ ಈ ಕೋವಿಡ್ ಸೋಂಕಿತರನ್ನು ಹೋಂ ಐಸೋಲೇಷನ್ ಮಾಡಲಾಗಿದ್ದು, ಆಶಾ ಕಾರ್ಯಕರ್ತೆಯರು ಮನೆ-ಮನೆಗೆ ಭೇಟಿ ನೀಡಿ ಆರೋಗ್ಯ ರಕ್ಷಣೆ ಸೇರಿದಂತೆ ವಿವಿಧ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಈ ಬಗ್ಗೆ ತಾಲೂಕು ವೈದ್ಯಾಧಿಕಾರಿ ಪ್ರತಿಕ್ರಿಯಿಸಿ "ಆರೋಗ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡಿದ್ದು, ಕೋವಿಡ್ ಬಾಧಿತ ವ್ಯಕ್ತಿಗಳಲ್ಲಿ ಸಾಮಾನ್ಯ ಸೋಂಕಿನ ಲಕ್ಷಣ ಇವೆ. ಎರಡು ದಿನ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಿ, ಬಳಿಕ ಹೋಂ ಐಸೋಲೇಷನ್ ಮಾಡಿದ್ದೇವೆ" ಎಂದರು.
Kshetra Samachara
15/06/2022 12:02 pm