ಅಣ್ಣಿಗೇರಿ: ರಾಜ್ಯ ಸರ್ಕಾರ ಹಾಗೂ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಕೃಷ್ಣ ಜಗ್ಗಲ್ ಅವರ ಆದೇಶದ ಮೇರೆಗೆ ಪಟ್ಟಣದ ಬಾಪೂಜಿ ವಿದ್ಯಾನಿಕೇತನ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ಹಾಗೂ ಫಸ್ಟ್ ಇಯರ್ ಕಾಲೇಜ್ ವಿದ್ಯಾರ್ಥಿಗಳಿಗೆ ಲಸಿಕೆಯನ್ನು ನೀಡಲಾಯಿತು.
ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಬಂದ ಅಧಿಕಾರಿಗಳಾದ ಎಂ.ಎ. ತಹಸಿಲ್ದಾರ್, ಪ್ರಶಾಂತ ಬೆಳ್ಳಿಕೊಪ್ಪ,ಎಸ್.ಆರ್. ಹರ್ಲಾಪುರ್,ರೇಣುಕಾ ಹಾಜರಿದ್ದು, ಒಟ್ಟು 142 ವಿದ್ಯಾರ್ಥಿಗಳಿಗೆ ಕೊವ್ಯಾಕ್ಸಿನ್ ಲಸಿಕೆಯನ್ನು ನೀಡಿದರು. ಈ ಸಂದರ್ಭದಲ್ಲಿ ಶಾಲೆಯ ಪ್ರಾಚಾರ್ಯರು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
Kshetra Samachara
17/01/2022 05:42 pm