ಧಾರವಾಡ: ವಾತಾವರಣ ಬದಲಾವಣೆಯಿಂದಾಗಿ ಇದೀಗ ಎಲ್ಲರಲ್ಲೂ ಮೈಕೈ ನೋವು, ಶೀತ, ಜ್ವರ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಧಾರವಾಡ ಜಿಲ್ಲಾಸ್ಪತ್ರೆಯಲ್ಲಂತೂ ಜನ ಜಂಗುಳಿಯೇ ಸೇರುತ್ತಿದೆ.
ಧಾರವಾಡ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆಂದು ಬರುವ ರೋಗಿಗಳು ಮೊದಲಿಗೆ ಓಪಿಡಿ ಚೀಟಿ ಮಾಡಿಸಬೇಕು. ಈ ಚೀಟಿ ಮಾಡಿಸಲು ದೊಡ್ಡ ಪ್ರಮಾಣದಲ್ಲಿ ಜನ ಜಂಗುಳಿಯೇ ಸೇರುತ್ತಿದೆ. ಕೆಲವರಂತೂ ಕೋವಿಡ್ ಲೆಕ್ಕಿಸದೇ ಮಾಸ್ಕ್ ಇಲ್ಲದೇ ಓಪಿಡಿ ಚೀಟಿ ಮಾಡಿಸಲು ಬಂದದ್ದು ಕಂಡು ಬಂತು.
ಧಾರವಾಡ ಜಿಲ್ಲೆಯಲ್ಲಿ ದಿನೇ ದಿನೇ ಕೋವಿಡ್ ಹೆಚ್ಚಾಗುತ್ತಿದ್ದು, ಜನ ಜಾಗೃತಗೊಳ್ಳಬೇಕಾದ ಅಗತ್ಯವಿದೆ. ಧಾರವಾಡ ಜಿಲ್ಲಾಸ್ಪತ್ರೆಗೆ ಬರುವ ಅನೇಕರು ಇದೀಗ ನೆಗಡಿ, ಕೆಮ್ಮು, ಜ್ವರದಿಂದ ಬಳಲುತ್ತಿದ್ದಾರೆ. ಹೀಗಾಗಿ ಈ ಆಸ್ಪತ್ರೆಯಲ್ಲೂ ಸಾಮಾಜಿಕ ಅಂತರ ಪಾಲನೆಯಾಗಬೇಕಾದ ಅನಿವಾರ್ಯತೆ ಇದೆ.
Kshetra Samachara
17/01/2022 04:33 pm