ನವಲಗುಂದ : ವಾರಾಂತ್ಯ ಕರ್ಫ್ಯೂ ಮುಗಿಯತ್ತಲೇ ಸೋಮವಾರ ಬೆಳಿಗ್ಗೆಯಿಂದ ಜನರ ಜೀವನ ಮತ್ತೆ ಯಥಾಸ್ಥಿತಿಯತ್ತ ಸಾಗಿದ್ದು, ನವಲಗುಂದ ಪಟ್ಟಣದ ಗಾಂಧೀ ಮಾರುಕಟ್ಟೆ, ಪ್ರಮುಖ ರಸ್ತೆಗಳು ಸೇರಿದಂತೆ ಪಟ್ಟಣದಲ್ಲಿ ಅಂಗಡಿ-ಮುಂಗಟ್ಟುಗಳು ಸಂಪೂರ್ಣ ತೆರೆದಿತ್ತು.
ವೀಕೆಂಡ್ ಕರ್ಫ್ಯೂನಿಂದಾಗಿ ಕಳೆದ ಎರಡು ದಿನಗಳಿಂದ ಜನರ ಜೀವನ ದುಡಿಮೆಗೆ ಸಾಕಷ್ಟು ಪೆಟ್ಟು ಬಿದ್ದಿತ್ತು. ಇನ್ನು ಈ ವೇಳೆ ತುರ್ತು ಸೇವೆ ಮತ್ತು ಅವಶ್ಯಕ ವಸ್ತುಗಳನ್ನು ಹೊರತು ಪಡಿಸಿ, ಎಲ್ಲದಕ್ಕೂ ಸರ್ಕಾರ ನಿರ್ಬಂಧ ಹೇರಿತ್ತು. ಆದರೆ ಈಗ ಜನರ ಜೀವನ ಸಹಜ ಸ್ಥಿತಿಯತ್ತ ಮರಳಿದೆ. ಈ ಹಿನ್ನೆಲೆಯಲ್ಲಿ ನವಲಗುಂದ ಪಟ್ಟಣದ ಮಾರುಕಟ್ಟೆ, ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಜನರು ದಿನನಿತ್ಯದ ಚಟುವಟಿಕೆಗಳಲ್ಲಿ ತೊಡಗಿದ್ದರು.
Kshetra Samachara
10/01/2022 02:20 pm