ಕಲಘಟಗಿ: ಕೊರೊನಾ ರೂಪಾಂತರಿ ಅಲೆ ಆತಂಕದ ಇದ್ದರೂ ಕೂಡ ಕಲಘಟಗಿ ಪಟ್ಟಣದಲ್ಲಿ ಜನರು ಮೈಮರೆತು ಮಾಸ್ಕ್ ಧರಿಸದೇ ಸಾಮಾಜಿ ಅಂತರ ಕಾಪಾಡಿಕೊಳ್ಳದೇ ಓಡಾಡುತ್ತಿದ್ದಾರೆ. ನಗರದ ಬಸ್ ನಿಲ್ದಾಣದಲ್ಲಿ ಶಾಲಾ-ಕಾಲೇಜ ವಿದ್ಯಾರ್ಥಿಗಳು ಮಾಸ್ಕ್ ಹಾಕಿಕೊಳ್ಳದೇ ಓಡಾಡುತ್ತಿರುವುದು ಸಾಮಾನ್ಯವಾಗಿದೆ.
ಈಗಾಗಲೇ ಕೊರೊನಾ ರೂಪಾಂತರಿ ಒಮಿಕ್ರಾನ್ ದೇಶಕ್ಕೆ ಕಾಲಿಟ್ಟಿದ್ದು,ರಾಜ್ಯದಲ್ಲಿಯೂ ಕೂಡ ಕೇಸ್ ಗಳು ಪತ್ತೆಯಾಗಿವೆ.ಹೀಗಾಗಿ ಸರ್ಕಾರ ಕೂಡ ಮತ್ತೆ ಮಾಸ್ಕ್ ಹಾಗೂ ಅಂತರ ಕಾಪಾಡಿಕೊಳ್ಳಿ ಅಂತ ಎಚ್ಚರಿಕೆ ಕೂಡ ನೀಡಿದೆ.
ಆದರೂ ಕಲಘಟಗಿ ನಗರದ ಜನರು ಮಾತ್ರ ಇದಕ್ಕೆ ಡೋಂಟ್ ಕೇರ್ ಎನ್ನುತ್ತಿದ್ದಾರೆ. ವ್ಯಾಪಾರಸ್ಥರು ಕೂಡ ಮಾಸ್ಕ್ ಹಾಕಿಕೊಳ್ಳದೆ ವ್ಯಾಪಾರದಲ್ಲಿ ನಿರತರಾಗಿದ್ದಾರೆ.
Kshetra Samachara
16/12/2021 05:07 pm