ಕುಂದಗೋಳ: ಧಾರವಾಡ ಜಿಲ್ಲೆಯಲ್ಲಿ ಮತ್ತೆ ಕೋವಿಡ್ ಸೋಂಕಿನ ಪ್ರಕರಣಗಳು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಕುಂದಗೋಳ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಮತ್ತೆ ಸಾರ್ವಜನಿಕ ಪರ್ದೇಶದಲ್ಲಿ ಮುಕ್ತವಾಗಿ ಕೋವಿಡ್ ಪರೀಕ್ಷೆ ಹಾಗೂ ಲಸಿಕೆ ನೀಡುವ ಕಾರ್ಯ ಕೈಗೊಂಡಿದೆ.
ಕುಂದಗೋಳ ತಹಶೀಲ್ದಾರ ಕಚೇರಿಗೆ ಬರುವ ಸಾರ್ವಜನಿಕರಿಗೆ ಕೋವಿಡ್ ತಪಾಸಣೆ ಹಾಗೂ ಲಸಿಕೆ ಪಡೆಯದೇ ಇದ್ದಲ್ಲಿ ಲಸಿಕೆ ನೀಡುವ ಕಾರ್ಯ ಸಹ ಕೈಗೊಂಡಿದೆ. ಸಾರ್ವಜನಿಕರು ಸಹ ಆರೋಗ್ಯ ಇಲಾಖೆ ಕಾರ್ಯಕ್ಕೆ ಅಷ್ಟೇ ಮಹತ್ವಕೊಟ್ಟಿದ್ದು ಎಲ್ಲರೂ ಲಸಿಕೆ ಹಾಗೂ ಕೋವಿಡ್ ಪರೀಕ್ಷೆ ಒಳಗಾಗುತ್ತಿದ್ದಾರೆ.
ಕುಂದಗೋಳ ತಾಲೂಕ ಆಸ್ಪತ್ರೆ ವತಿಯಿಂದ ತಹಶೀಲ್ದಾರ ಕಚೇರಿ ಮತ್ತು ಮಾರ್ಕೇಟ್ ರಸ್ತೆ ಛಾವಡಿ ಪ್ರದೆಶದಲ್ಲೂ ಸಹ ಲಸಿಕೆ ಹಾಕುವ ಕಾರ್ಯ ನಡೆದಿದ್ದು ಗೃಹಿಣಿಯರು ಸಾರ್ವಜನಿಕರು ಕಚೇರಿಗೆ ಬಂದು ಲಸಿಕೆ ಪಡೆಯುತ್ತಿದ್ದಾರೆ.
ಒಟ್ಟಾರೆ ಧಾರವಾಡ ಜಿಲ್ಲೆಯಲ್ಲಿ ಈ ಹಿಂದೆ ಸಹ ಕೋವಿಡ್ ಎರಡನೇ ಅಲೆ ಸಂದರ್ಭ ಅತಿ ಹೆಚ್ಚು ವ್ಯಾಕ್ಸಿನ್ ನೀಡಿ ಅತಿ ಕಡಿಮೆ ಕೋವಿಡ್ ಕೇಸ್ ದಾಖಲಾದ ತಾಲೂಕಾದ ಕುಂದಗೋಳ. ಈ ಬಾರಿಯೂ ಮೊದಲೇ ಮುನ್ನೆಚ್ಚರಿಕೆ ಕ್ರಮಕ್ಕೆ ಸಿದ್ಧವಾಗಿದೆ.
Kshetra Samachara
30/11/2021 01:29 pm