ಹುಬ್ಬಳ್ಳಿ: ಗರ್ಭಿಣಿಯೋರ್ವಳು ಆ್ಯಂಬುಲನ್ಸ್ ನಲ್ಲಿಯೇ ಹೆಣ್ಣು ಮಗುವಿಗೆ ಜನ್ಮನೀಡಿದ ಘಟನೆ ಧಾರವಾಡ ಜಿಲ್ಲೆ ಧಾರವಾಡ ತಾಲ್ಲೂಕು ಕ್ಯಾರಕೊಪ್ಪ ಬಳಿ ನಡೆದಿದೆ.
ಮೆಹಬೂಬಿ ರಿಯಾಜ್ ದೊಡ್ಮನಿ ಎಂಬ ಮಹಿಳೆ ಹೆರಿಗೆ ನೋವಿನಿಂದ ಬಳಲುತ್ತಿದ್ದರು.
ಈ ವೇಳೇ 108 ಗೆ ಕರೆ ಮಾಡಲಾಗಿದ್ದು, ಸ್ಥಳಕ್ಕಾಮಿಸಿದ ಆ್ಯಂಬುಲನ್ಸ್ ನಲ್ಲಿಯೇ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದ ಮಧ್ಯದಲ್ಲಿ ಆ್ಯಂಬುಲನ್ಸ್ ಸಿಬ್ಬಂದಿ ಹೆರಿಗೆ ಮಾಡಿಸಿಕೊಂಡಿದ್ದಾರೆ.
ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದು,ಸಮೀಪದ ಆಸ್ಪತ್ರೆಗೆ ಸೇರಿಸಲಾಗಿದೆ.
ಇನ್ನೂಆ್ಯಂಬುಲನ್ಸ್ ಚಾಲಕ ಕುಮಾರಸ್ವಾಮಿ ಮತ್ತು ಮೆಡಿಕಲ್ ಟೆಕ್ನಿಷಿಯನ್ ವಿರುಪಾಕ್ಷ ಅವರ ಕಾರ್ಯಕ್ಕೆ ಕುಟುಂಬಸ್ಥರು ಅಭಿನಂದನೆ ಸಲ್ಲಿಸಿದರು.
Kshetra Samachara
22/09/2020 10:16 am