ಧಾರವಾಡ: ಕೊರೊನಾ ಮಹಾಮಾರೆ ತಡೆಯಲು ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳು ನಿರಂತರ ಪ್ರಯತ್ನ ಮಾಡುತ್ತಿವೆ.ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಕಾರ್ಯಕ್ರಮಗಳಿಂದ ಜಾಗೃತಿ ಮೂಡಿಸಿ ಹೇಳಿದ್ರು ಅವಳಿನಗರದ ಮಂದಿ ಕೇಳ್ತಿಲ್ಲ,ಆದ್ರೆ ಇದೀಗ ಮತ್ತೆ ಕೊರೋನಾ ದಾಳಿ ಮಾಡಿದೆ!
ಕೊರೊನಾ ಮತ್ತೆ ಬಂತ ಅಂತ ಗಾಬರಿಯಾಗಬೇಡಿ. ಈ ಕೊರೊನಾ ಅಪಾಯಕಾರಿಯಲ್ಲ. ಮಾರಣಾಂತಿಕವಲ್ಲ.ಇದು ಪ್ರಾಣ ಉಳಿಸುವ ಕೊರೋನಾ..ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೊರೊನಾ ವೈರಾಣು ವೇಷಧಾರಿಯೊಬ್ಬರು ನಗರದ ಸಿಬಿಟಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಕಾಣಿಸಿಕೊಂಡರು.ಹಾಗಾಗಿ ಇದೇನಪ್ಪಾ ಮತ್ತೆ ಬಂತಾ ಅಂತ ಆತಂಕಗೊಳ್ಳಬೇಡಿ!
ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ ಅವರ ಪರಿಕಲ್ಪನೆಯಲ್ಲಿ ಈ ಕಾರ್ಯ ಕೈಗೊಂಡಿದ್ದು, ಪ್ರತಿನಿತ್ಯ ಮಾಸ್ಕ್ ಧರಿಸದ ವ್ಯಕ್ತಿಗಳನ್ನು ಕೊರೊನಾ ತಪಾಸಣೆಗೆ ಒಳಪಡಿಸುವ ಕಾರ್ಯಾಚರಣೆ ವೇಳೆಯಲ್ಲಿ ಕಲಾವಿದರೊಬ್ಬರನ್ನು ಬಳಸಿಕೊಂಡು ಅವರಿಗೆ ಕೊರೊನಾ ವೈರಾಣು ವೇಷ ಹಾಕಿಸಿ, ಜನ ನಿಬಿಡ ಸ್ಥಳಗಳಲ್ಲಿ ಹಠಾತ್ ಕಳಿಸಿ, ಮಾಸ್ಕ್ ಧರಿಸದ ವ್ಯಕ್ತಿಗಳನ್ನು ಕೋವಿಡ್ ತಪಾಸಣೆಗೆ ಕರೆತರುವ ಕಾರ್ಯಾಚರಣೆ ಇಂದಿನಿಂದ ಜಿಲ್ಲೆಯಲ್ಲಿ ಪ್ರಾರಂಭವಾಗಿದೆ.
ನಾದಝೇಂಕಾರ ಸಂಸ್ಥೆಯ ಯಮನಪ್ಪ ಜಾಲಗಾರ ಅವರು ತಮ್ಮ ತಂಡದ ಬಸವರಾಜ ಗುಡ್ಡಪ್ಪನವರ ಅವರಿಗೆ ಕೊರೊನಾ ವೇಷ ತೊಡಿಸಿ , ಜನರ ಮಧ್ಯೆ ಕಳಿಸುತ್ತಿದ್ದಾರೆ. ಪ್ರಸಾದನ ಕಲಾವಿದ ಸಂತೋಷ ಮಹಾಲೆ ಈ ವೇಷ ಭೂಷಣ ಸಿದ್ಧಪಡಿಸಿದ್ದಾರೆ.
Kshetra Samachara
11/12/2020 05:51 pm