ಹುಬ್ಬಳ್ಳಿ: ಮಾಸ್ಕ್ ಹಾಕಿಕೊಳ್ಳಿ ಅಂತ ಎಷ್ಟ ಹೇಳಿದ್ರೂ ನಮ್ಮ ಜನ ಕೇಳೋದಿಲ್ಲ.ಮಾಸ್ಕ್ ಹಾಕಿಲ್ಲ ಅಂದ್ರೆ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಿ ಅಂತ ಹೇಳಿದ್ರೂ ಕೇಳೊದಿಲ್ಲ.ಮಾಸ್ಕ್ ಹಾಕದೇ ಬರುವವರಿಗೆ ಕೋವಿಡ್ ಟೆಸ್ಟ್ ಮಾಡಿಸಬೇಕು ಅಂದ್ರೇ ವೈದ್ಯಕೀಯ ಸಿಬ್ಬಂದಿಗಳು ಮಾರ್ಕೆಟ್ ನಲ್ಲಿ ಸರ್ಕಸ್ ಮಾಡಬೇಕಿದೆ.
ತಮ್ಮ ಆರೋಗ್ಯ ತಾವು ಕಾಪಾಡಿಕೊಳ್ಳಲು ಬೇರೆಯವರು ದುಂಬಾಲು ಬಿಳಬೇಕಿದೆ ಇಂತಹದೊಂದು ಘಟನೆ ಹುಬ್ಬಳ್ಳಿಯ ದುರ್ಗದಬೈಲ್ ನಲ್ಲಿ ನಡೆದಿದೆ.ವ್ಯಕ್ತಿಯೊಬ್ಬರು ಮಾಸ್ಕ್ ಧರಿಸದೇ ಬಂದ ಸಂದರ್ಭದಲ್ಲಿ ವೈದ್ಯಕೀಯ ಸಿಬ್ಬಂದಿಗಳು ಕೋವಿಡ್ ಟೆಸ್ಟ್ ಮಾಡಿಸಲು ಕರೆದರೇ ಅವರೊಂದಿಗೆ ವಾಗ್ವಾದಕ್ಕೆ ಇಳಿದ ದೃಶ್ಯವೊಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವೈದ್ಯಕೀಯ ಸಿಬ್ಬಂದಿಗಳ ಜೊತೆಗೆ ಜಗಳಕ್ಕೆ ಇಳಿಯುವಂತ ಪ್ರಸಂಗ ಕೂಡ ಜರುಗಿರುವುದು ಸರ್ವೆ ಸಾಮಾನ್ಯವಾಗಿದೆ.ಜನರು ತಮ್ಮ ಆರೋಗ್ಯ ತಾವು ಕಾಪಾಡಿಕೊಳ್ಳಲು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲು ಹಿಂದೇಟು ಹಾಕುವುದು ವಿಪರ್ಯಾಸಕರ ಸಂಗತಿಯಾಗಿದೆ.
Kshetra Samachara
03/12/2020 02:07 pm