ಪಬ್ಲಿಕ್ ನೆಕ್ಸ್ಟ್ : ಪ್ರಶಾಂತ ಲೋಕಾಪುರ
ಧಾರವಾಡ : ಇಡೀ ಪ್ರಪಂಚಕ್ಕೆ ವಕ್ಕರಿಸಿದ ಕೊರೋನಾ ಮಹಾಮಾರಿ ತಡೆಯಲು ಕೋವಿಡ್ -19 ಲಸಿಕೆಗೆ ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿರುವ ಬೆನ್ನಲ್ಲೇ ಇಷ್ಟು ದಿನ ಕೋವಿಡ್-19 ವಿರುದ್ಧ ಹಗಲು ರಾತ್ರಿ ಶ್ರಮಿಸಿದ ಆರೋಗ್ಯ ಇಲಾಖೆ ಅಧಿಕಾರಿಗಳು, ವೈದ್ಯರು, ಸಿಬ್ಬಂದಿ ವರ್ಗದ ತಂಡವು ಇದೀಗ ಲಸಿಕೆ ಹಾಕಲು ಸಿದ್ದತೆ ಮಾಡಿಕೊಳ್ಳುತ್ತಿದೆ.
ಹೀಗಾಗಿ ರಾಜ್ಯ ಸರ್ಕಾರ ಸೂಚನೆ ನೀಡಿರುವ ಬೆನ್ನಲ್ಲೇ ಧಾರವಾಡ ಜಿಲ್ಲಾಡಳಿತವು ಕೊರೊನಾ ವೈರಸ್ ವಿರುದ್ಧ ಹೋರಾಡುವ ಲಸಿಕೆ ಎಷ್ಟು ಜನರಿಗೆ ಹಾಕುವುದು,ಹಾಗೂ ದೊಡ್ಡ ಪ್ರಮಾಣದಲ್ಲಿ ಲಸಿಕೆ ಬಂದ್ರೆ ಅದನ್ನು ಎಲ್ಲಿ ಸಂಗ್ರಹಿಸುವುದು ಸೇರಿ,ಲಸಿಕೆ ನಿರ್ವಹಣೆ ಮಾಡುವುದರೊಂದಿಗೆ ಸಭೆ ಮಾಡಲಾಗಿದ್ದು.
ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣವನ್ನು ತರಲು ಹಲವಾರು ಜಾಗೃತಿ ಮೂಡಿಸುವ ವೈದ್ಯರು,ಅಧಿಕಾರಿಗಳು, ಸಿಬ್ಬಂದಿ ವರ್ಗದವರಿಗೆ ಲಸಿಕೆ ಬಂದ ತಕ್ಷಣ ಕೂಡಲೇ ಅದನ್ನು ಅಗತ್ಯವಿರುವ ವ್ಯಕ್ತಿಗಳಿಗೆ ನೀಡಲು ಮುಂದಾಗಿದೆ
ಈ ಕುರಿತು ಪಬ್ಲಿಕ್ ನೆಕ್ಸ್ಟ್ ಜೊತೆಗೆ ಜಿಲ್ಲಾ ಮಾತನಾಡಿ,ಜಿಲ್ಲಾ ಆರ್ ಸಿಎಚ್ ಅಧಿಕಾರಿ ಎಸ್.ಎಮ್ ಹೊನಕೇರಿ ಮಾತನಾಡಿ,
ಸರ್ಕಾರದ ಆದೇಶ ಪ್ರಕಾರ ಕೋವಿಡ್- 19 ಲಸಿಕೆಗೆ ನಿರ್ದೇಶನದಂತೆ ಪ್ರಪ್ರಥಮ ಲಸಿಕೆ ನೀಡಲು ನೋಂದಣಿ ಮಾಡಿಕೊಳ್ಳಲು,
ಜಿಲ್ಲೆಯಲ್ಲಿರುವ ಖಾಸಗಿ ಆಸ್ಪತ್ರೆ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಸಿಬ್ಬಂದಿ ವರ್ಗದವರು1343 ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡಿಕೊಂಡವರು ನೋಂದಣಿ ಮಾಡಿಕೊಂಡಿದ್ದಾರೆ.
ಈಗಾಗಲೇ 19600 ಸರ್ಕಾರಿ,ಖಾಸಗಿ ವೈದ್ಯರು ,ನರ್ಸ ಹಾಗೂ ಸಿಬ್ಬಂದಿ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ.ಮೊದಲ ಹಂತದಲ್ಲಿ ಇವರಿಗೆ ಚುಚ್ಚುಮದ್ದು ನೀಡಲಾಗುತ್ತದೆ. ಹಂತ ಹಂತವಾಗಿ ಉಳಿದವರಿಗೆ ಲಸಿಕೆ ನೀಡಲು ಯೋಜನೆ ರೂಪಿಸಿದೆ ಎಂದು ಅವರು ಹೇಳಿದರು.
ಜಿಲ್ಲೆಯ ಆರೋಗ್ಯ ಇಲಾಖೆಯಿಂದ ಲಸಿಕೆ ಕುರಿತು ಹೇಗೆಲ್ಲ ಸಿದ್ದತೆ ಮಾಡಿಕೊಂಡಿದೆ.ಅನುವ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಶವಂತ ಮದೀನಕರ್ ಮಾಹಿತಿ ನೀಡಿದ್ದು, ಸಂಗ್ರಹಿಸಲು 50 ಸಾವಿರಕ್ಕೂ ಹೆಚ್ಚು ಲಸಿಕೆ ಸಂಗ್ರಹಕ್ಕೆ ವ್ಯವಸ್ಥೆ ಮಾಡಿಕೊಂಡಿದೆ.ಜಿಲ್ಲಾ ಆಸ್ಪತ್ರೆ ವಾಕ್ ಇನ್ ಕೂಲರ್ ಇದ್ದು 25 ರಿಂದ 30 ಸಾವಿರ ಲಸಿಕೆ ಸಂಗ್ರಹ ಮಾಡುವ ಶಕ್ತಿ ಹೊಂದಿದೆ.
ಇನ್ನೂ ಕಿಮ್ಸ್ ಆಸ್ಪತ್ರೆಯಲ್ಲಿ ಡಿ- ಫ್ರಿಜರ್ ಇದ್ದು,ಅಲ್ಲಿಯೂ ಕೂಡಾ ಲಸಿಕೆ ಹಾಗೂ ಸುಚಿರಾಯು ಆಸ್ಪತ್ರೆಯಲ್ಲಿ 35 ಸಾವಿರ ಲಸಿಕೆ ಸಂಗ್ರಹಿಸುವ ವ್ಯವಸ್ಥೆ ಇದೆ.ಜೊತೆಗೆ ಅಗತ್ಯ ಬಿದ್ದರೆ ಪಶುಸಂಗೋಪನೆ ಇಲಾಖೆಯಿಂದಲೂ ಸಹಕಾರ ಹೇಳಲಾಗಿದ್ದು ಅಲ್ಲಿನ ಐಸ್ ಪ್ಯಾಕ್ ಬಳಸಿಕೊಳ್ಳಲು ತಯಾರಿ ನಡೆಸಿದೆ.
ಕೋವಿಡ್ ಲಸಿಕೆಗೆ ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿರುವ ಬೆನ್ನಲ್ಲೇ ಲಸಿಕೆ ದಾಸ್ತಾನು ಹಾಗೂ ವಿತರಣೆಗೆ ಜಿಲ್ಲೆಯಲ್ಲಿ ಭರದ ತಯಾರಿ ಶುರುವಾಗಿದೆ.ಲಸಿಕೆಯನ್ನು ವೈಜ್ಞಾನಿಕ ಹಾಗೂ ಸುರಕ್ಷಿತವಾಗಿ ಸಂಗ್ರಹಿಸಿಡಲು ಸಜ್ಜಾಗಿದೆ.
Kshetra Samachara
01/12/2020 09:20 pm