ಹುಬ್ಬಳ್ಳಿ: ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದೇ ಖ್ಯಾತಿ ಪಡೆದ ಹುಬ್ಬಳ್ಳಿಯಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಒಂದಿಲ್ಲೊಂದು ಸಾಧನೆ ದಾಖಲಾಗುತ್ತಲೇ ಇದೆ.ಈಗ ಖಾಸಗಿ ಆಸ್ಪತ್ರೆಯೊಂದು ಅದ್ಭುತ ಕಾರ್ಯಸಾಧನೆ ಮೂಲಕ ವೃದ್ಧೆಯೊಬ್ಬರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನೀಡುವ ಮೂಲಕ ಮರುಜೀವ ನೀಡಿದೆ.ಅಷ್ಟಕ್ಕೂ ಆ ಆಸ್ಪತ್ರೆ ಯಾವುದು ಅಂತೀರಾ ಈ ಸ್ಟೋರಿ ನೋಡಿ..
ಪ್ರೀಯ ವೀಕ್ಷಕರೇ ಈ ಗಡ್ಡೆಯನ್ನೊಮ್ಮೆ ನೋಡಿ ಬೀಡಿ...ಒಂದು ಕೆಜಿ ವಸ್ತುವನ್ನು ಸ್ವಲ್ಪ ದೂರ ಹೊತ್ತುಕೊಂಡು ಹೋದರು ಕೂಡ ಬಾರ ಎನಿಸುತ್ತದೆ. ಆದರೇ ಇಲ್ಲೊಬ್ಬ ವೃದ್ಧೆ ಸುಮಾರು 9 ಕೆಜಿ ಭಾರದ ಗಡ್ಡೆಯನ್ನು ತನ್ನ ಹೊಟ್ಟೆಯಲ್ಲಿಂಟುಕೊಂಡು ಸುಮಾರು ವರ್ಷ ಜೀವನ ನಡೆಸಿದ್ದು,ಈ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದು ಹುಬ್ಬಳ್ಳಿ ಕೆಎಲ್ಇ ಸಂಸ್ಥೆಯ ಸುಚಿರಾಯು ಆಸ್ಪತ್ರೆ ವೃದ್ಧೆಗೆ ಪುನರ್ಜನ್ಮ ನೀಡಿದೆ.
ಹೌದು..ಹೊಟ್ಟೆ ಉಬ್ಬುವಿಕೆ ಹಾಗೂ ನೋವಿನಿಂದ ಬಳಲುತ್ತಿದ್ದ 55 ವರ್ಷದ ಮಹಿಳೆಯೊಬ್ಬರ ಹೊಟ್ಟೆಯಲ್ಲಿದ್ದ ಅಪರೂಪದ ಬೃಹದಾಕಾರದ ಗಡ್ಡೆಯನ್ನು ಹುಬ್ಬಳ್ಳಿಯ ಸುಚಿರಾಯು ಆಸ್ಪತ್ರೆಯ ವೈದ್ಯರು ಶಸ್ತ್ರ-ಚಿಕಿತ್ಸೆಯ ಮೂಲಕ ಹೂರತೆಗೆದಿದ್ದಾರೆ
ಆಸ್ಪತ್ರೆಯ ಶಸ್ತ್ರ-ಚಿಕಿತ್ಸಾತಜ್ಞ ವೈದ್ಯ ಡಾ.ಜಯಪ್ರಭು ಉತ್ತೂರ ಸತತ ಮೂರು ಘಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ 38 ಸೆಂ.ಮಿ ಉದ್ದ 26 ಸೆಂ.ಮಿ ಅಗಲ ಹಾಗೂ 9ಕೆ ಜಿ ತೂಕವಿರುವ ಮಾಂಸದ ಗಡ್ಡೆಯನ್ನು ಹೂಟ್ಟೆಯಿಂದ ಹೂರತೆಗೆಯವಲ್ಲಿ ಯಶಸ್ವಿಯಾಗಿದ್ದಾರೆ.
ಈ ಮಹಿಳೆಯಲ್ಲಿ “ ಸೈಟಸ್ ಇನವರ್ಸಸ್ ಟೂಟ್ಯಾಲಿಸ್” ಎಂಬ ಬೆಳವಣೆಗೆಯ ಸಮಸ್ಯೆ ಸ್ಕ್ಯಾನಿಂಗ ನಂತರ ಕಂಡು ಬಂದಿಂದು ಅತ್ಯಂತ ವಿರಳಾತೀತವಾದ ವೈದ್ಯಕೀಯ ಸ್ಥಿತಿ ಎಂಬುದನ್ನು ಡಾ. ಜಯಪ್ರಭು ಉತ್ತೂರ ತಿಳಿಸಿದರು.ಇನ್ನೂ ಅರವಳಿಕೆ ತಜ್ಞರಾದ ಡಾ.ತೇಜಸ ಕುಲಕರ್ಣಿ ಹಾಗೂ ಡಾ. ಸಾಗರ ಕೂಳ್ಳಿ ಮತ್ತು ಸಹಾಯಕ ತಂಡದ ಸದಸ್ಯರಿಗೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ ವಿಶಾಖಾ ಮಧುರಕರ ಅಭಿನಂದನೆ ಸಲ್ಲಿಸಿದ್ದಾರೆ.
Kshetra Samachara
11/11/2020 05:09 pm