ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೇಗ ಟೆಸ್ಟ್ ಮಾಡಿಸಿದರೇ ಬೇಗನೇ ಗುಣಮುಖರಾಗಬಹುದು : ಜೋಶಿ ಮಾತು

ಹುಬ್ಬಳ್ಳಿ: ಯಾವುದೇ ವ್ಯಕ್ತಿ ಕೋವಿಡ್ ತಪಾಸಣೆ ಮಾಡುವ ಬಗ್ಗೆ ಹಿಂಜರಿಯಬಾರದು.ತಪಾಸಣೆ ಬೇಗ ಮಾಡಿಸಿದರೇ ಬೇಗ ಗುಣಮುಖರಾಗಬಹುದು ಎಂದು ಕೋವಿಡ್ ಗೆದ್ದು ಬಂದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ನಗರದಲ್ಲಿಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಕೋರೊನಾ ವಾರಿಯರ್ಸ್‌ಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು,ಉತ್ತಮ ಆಹಾರ ಪದ್ದತಿ ಅನುಸರಿಸಿ ಅಲ್ಲದೇ ಜಾಗರೂಕತೆಯಿಂದ ಜೀವನ ನಡೆಸಬೇಕಿದೆ ಎಂದರು.

ಭಾರತ ಸರ್ಕಾರದ ಪರವಾಗಿ ಕಿಮ್ಸ್ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿದ ಅವರು,ಕಿಮ್ಸ್ ಕೊರೋನಾ ಸಂದರ್ಭದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು,ಸಾವಿರಾರು ಜನರು ಗುಣಮುಖರಾಗಲು ಕಿಮ್ಸ್ ಸಾಕ್ಷಿಯಾಗಿದೆ ಎಂದರು.

ಇದೇ ವೇಳೆ ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿ ಸೇರಿದಂತೆ ಕರೋನಾ ವಾರಿಯರ್ಸ್‌ಗೆ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.

Edited By : Nirmala Aralikatti
Kshetra Samachara

Kshetra Samachara

31/10/2020 05:27 pm

Cinque Terre

28.03 K

Cinque Terre

0

ಸಂಬಂಧಿತ ಸುದ್ದಿ