ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ವರ್ಗಾವಣೆಯಾದ ಸಾರಿಗೆ ನಿರ್ವಾಹಕಿಗೆ ಗ್ರಾಮಸ್ಥರಿಂದ ಸನ್ಮಾನ

ಕುಂದಗೋಳ ಗದಗ ಮಾರ್ಗದ ಕೆ.ಎಸ್.ಆರ್.ಟಿ.ಸಿ ಬಸ್ ನಿರ್ವಾಹಕರಾಗಿ ಕಳೆದ ನಾಲ್ಕು ವರ್ಷಗಳಿಂದ ಸೇವೆ ಸಲ್ಲಿಸಿ ಜನರ ಮೆಚ್ಚುಗೆಗೆ ಪಾತ್ರವಾದ ನಿರ್ವಾಹಕಿ ಜಂದಿಮಾ ಗದಗ ಅವರನ್ನು ಗುಡೇನಕಟ್ಟಿ ಗ್ರಾಮಸ್ಥರು ಸನ್ಮಾನ ಮಾಡಿದರು.

ಹೌದು ! ಜಂದಿಮಾ ಅವರು ಗದಗ ಬೆಟಿಗೇರಿ ಡಿಪೋದಿಂದ ಬೇರೆ ಕಡೆ ಕಾರ್ಯಕ್ಕಾಗಿ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಪ್ರಯಾಣಿಕರ ಜೊತೆ ಉತ್ತಮ ಒಡನಾಟ ಹಾಗೂ ಕರ್ತವ್ಯ ಪ್ರಜ್ಞೆ ಮೆಚ್ಚಿಕೊಂಡ ಗುಡೇನಕಟ್ಟಿ ಗ್ರಾಮಸ್ಥರು ಸನ್ಮಾನ ಮಾಡಿ ಬೀಳ್ಕೊಟ್ಟರು.

ಈ ಸಂದರ್ಭದಲ್ಲಿ ನಿರ್ವಾಹಕಿ ಜಂದಿಮಾ ಅವರಿಗೆ ಶಾಲು ಹೊದಿಸಿ ಹಣ್ಣಿನ ತಟ್ಟೆಯ ಕೊಟ್ಟು ಅವರನ್ನು ಸನ್ಮಾನಿಸಲಾಯಿತು. ಹಿರಿಯರಾದ ಚನ್ನಬಸಪ್ಪ ಸಿದ್ದಣ್ಣನವರ, ಬಸವರಾಜ ಯೋಗಪ್ಪನವರ, ಸಾರಿಗೆ ವ್ಯವಸ್ಥಾಪಕ ಪ್ರಕಾಶ ಹುಗ್ಗಣ್ಣವರ್, ಎ.ಸಿ.ಮುಲ್ಲಾ ಹನುಮಂತಪ್ಪ ಬಳ್ಳಾರಿ, ಎಚ್. ಡಿ.ನಾಯ್ಕರ್ ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

05/04/2022 01:38 pm

Cinque Terre

28.19 K

Cinque Terre

3

ಸಂಬಂಧಿತ ಸುದ್ದಿ