ಹುಬ್ಬಳ್ಳಿ : ನಾನು ಸೂಜಿ ಎಂಬ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಈಗಾಗಲೇ ಚಿತ್ರದ ಹಾಡುಗಳು ಸಖತ್ ಸದ್ದು ಮಾಡುತ್ತಿದ್ದು, ಅದರಲ್ಲೂ ಆಣೆ ಮಾಡಿ ಹೇಳುತಿನಿ ಹಾಡು ಎಲ್ಲರ ಮನಸ್ಸಲ್ಲಿ ಉಳಿದಿದ್ದು ಸಂತಸ ತಂದಿದೆ. ಎಲ್ಲ ಚಿತ್ರಕ್ಕಿಂತ ಗುರು ಶಿಷ್ಯರು ಚಿತ್ರದಲ್ಲಿ ವಿಭಿನ್ನವಾಗಿ ಕಾಣುತ್ತಿದ್ದೇನೆಂದು ನಟಿ ನಿಶ್ವಿಕಾ ಹೇಳಿದರು.
ನಗರದ ಖಾಸಗಿ ಹೊಟೇಲ್ ನಲ್ಲಿ ಗುರು ಶಿಷ್ಯರು ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ನಾನು ಹಿಂದೆ ಮಾಡಿದ ಚಿತ್ರಗಳಲ್ಲಿ ಬೋಲ್ಡ್ ಆಗಿ, ಸಿಟಿ ಹುಡುಗಿಯಾಗಿ ನಟಸಿದ್ದೇ. ಇದೆ ಮೊದಲ ಬಾರಿಗೆ ಹಳ್ಳಿ ಹುಡಗಿಯಾಗಿ ಅಭಿನಯಸುತ್ತಿದ್ದೇನೆ. ಸೂಜಿ ಎಂಬ ಪಾತ್ರ ನಂಗೆ ವಿಶೇಷವಾದ ಒಂದು ಪಾತ್ರ ಎಂದರು.
ಇನ್ನು ಹುಬ್ಬಳ್ಳಿ ಎಂದರೆ ನಂಗೆ ತುಂಬ ಇಷ್ಟ, ಇಲ್ಲಿನ ಊಟ, ಜನರ ಪ್ರೀತಿ ಸಾಕಷ್ಟು ಇಷ್ಟ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
17/09/2022 11:52 am