ಹುಬ್ಬಳ್ಳಿ: ನೈಜ ಘಟನೆ ಆಧಾರಿತ ಕರ್ಮಣ್ಯೇ ವಾಧಿಕಾರಸ್ತೆ ಚಲನಚಿತ್ರ ಜುಲೈ 15 ರಂದು ರಾಜ್ಯಾದ್ಯಂತ ಬಿಡುಗಡೆ ಮಾಡಲಾಗುತ್ತಿದೆ ಎಂದು ಚಿತ್ರದ ನಾಯಕ ನಟ ಅಭಿಷೇಕ ಶೆಟ್ಟಿ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ಮಣ್ಯೇ ವಾಧಿಕಾರಸ್ತೆ ಸಸ್ಪೆನ್ಸ್, ಆ್ಯಕ್ಷನ್, ಥ್ರೀಲರ್ ಒಳಗೊಂಡಿದ್ದು, ಒಬ್ಬ ಪ್ರಭಾವಿ ಆರ್ಕಿಟೆಕ್ಚರ್ ಓರ್ವನ ಸಾವು ಯಾವ ರೀತಿಯಲ್ಲಿ ನಿದ್ದೆಗೆಡಿಸುವುದು, ಸಂಜೀವಿನಿ ಹುಡುಕುವ ಸಾಹಸದಲ್ಲಿ ಸಿಲುಕುವ ಪ್ರಸಂಗ ಚಿತ್ರದಲ್ಲಿದೆ. ಶ್ರೀಹರಿ ಆನಂದ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ ಎಂದರು.
ಚಿತ್ರವನ್ನು ಬೆಂಗಳೂರು, ಮಂಗಳೂರು, ದಾಂಡೇಲಿ, ಹುಬ್ಬಳ್ಳಿ, ತೀರ್ಥಹಳ್ಳಿ ಸೇರಿದಂತೆ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಎರಡು ಹಾಡುಗಳಿರುವ ಚಿತ್ರಕ್ಕೆ ರುತ್ವಿಕ್ ಮುರಳಿಧರ ಸಂಗೀತ ನೀಡಿದ್ದಾರೆ. ಉದಯ ಲೀಲಾ ಛಾಯಾಗ್ರಹಣ ಮಾಡಿದ್ದಾರೆ. ರಾಜ್ಯಾದ್ಯಂತ 100 ಅಧಿಕ ಟೇಟರ್ ಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದರು.
Kshetra Samachara
09/07/2022 01:16 pm