ಧಾರವಾಡ: ವಿದ್ಯಾರ್ಥಿಗಳಿಗೆ ಶಿಕ್ಷಣ ಎಷ್ಟು ಮುಖ್ಯವೋ ನೈತಿಕ ಶಿಕ್ಷಣವೂ ಅಷ್ಟೇ ಮುಖ್ಯ. ವಿದ್ಯಾರ್ಥಿಗಳ ಬದುಕಿನಲ್ಲಿ ನೈತಿಕ ಶಿಕ್ಷಣದ ಮೌಲ್ಯಗಳನ್ನು ಹುಟ್ಟು ಹಾಕುವ ಮೂಲಕ ಉಜ್ವಲ ಭವಿಷ್ಯಕ್ಕೆ ಅಡಿಪಾಯ ಹಾಕುವ ಮೂಲಕ ಧಾರವಾಡಲ್ಲೊಂದು ಶಿಕ್ಷಣ ಸಂಸ್ಥೆ ಸಾಧನೆಯನ್ನು ಮಾಡುತ್ತಿದೆ. ವಿದ್ಯಾರ್ಥಿಗಳ ಸಾಧನೆಯ ಮೂಲಕವೇ ಶಿಕ್ಷಣ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸುವ ಕಾರ್ಯಕ್ಕೆ ಶಿಕ್ಷಣ ಕಾಶಿಯ ಅರ್ಜುನ್ ಸೈನ್ಸ್ ಪಿಯು ಕಾಲೇಜು ಮುಂದಾಗಿದೆ.
ಶಾಂತಿನಿಕೇತನ ಸೈನ್ಸ್ ಪಿಯು ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಯಾಗಿರುವ ಅರ್ಜುನ ಸೈನ್ಸ್ ಪಿಯು ಕಾಲೇಜು ಸುಮಾರು ವರ್ಷಗಳಿಂದ ಸೈನ್ಸ್ ವಿಭಾಗದಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ಸಾಕಷ್ಟು ಜನಮನ್ನಣೆ ಪಡೆದಿದೆ. ಭವ್ಯವಾದ ಕಟ್ಟಡದಲ್ಲಿ ಸ್ವಚ್ಛಂದ ಪರಿಸರದಲ್ಲಿ ತಲೆ ಎತ್ತಿರುವ ಅರ್ಜುನ ಸೈನ್ಸ್ ಪಿಯು ಕಾಲೇಜು ವಿದ್ಯಾರ್ಥಿಗಳ ವೈಯಕ್ತಿಕ ಕಾಳಜಿಯ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಯ ದೂರದೃಷ್ಟಿಕೋನದ ಮೂಲಕ ಶಿಕ್ಷಣವನ್ನು ನೀಡುತ್ತಿದೆ.
ಸುಸಜ್ಜಿತ ಗ್ರಂಥಾಲಯ, ಹೈಟೆಕ್ ಕ್ಲಾಸ್ ರೂಮ್, ನುರಿತ ಬೋಧಕ ಸಿಬ್ಬಂದಿ ಸಮಾಗಮದೊಂದಿಗೆ ಶಿಕ್ಷಣ ಸೇವೆ ಸಲ್ಲಿಸುತ್ತಿದೆ ಅರ್ಜುನ ಸೈನ್ಸ್ ಪಿಯು ಕಾಲೇಜು. ಐಐಟಿ ಪದವೀಧರ ಕನಸಿನ ಕೂಸಾಗಿರುವ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳನ್ನು ವಿದ್ಯಾವಂತರನ್ನಾಗಿ ಮಾತ್ರ ಮಾಡದೇ ಉಜ್ವಲ ಭವಿಷ್ಯದ ಅವಿಭಾಜ್ಯ ಅಂಗವಾಗಿರುವ ಸ್ಪರ್ಧಾತ್ಮಕ ಪರೀಕ್ಷೆಗಳಾಗಿರುವ JEE/NEET/K-CET/KVPY ಸೇರಿದಂತೆ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಾಧನೆ ಮಾಡುವಂತೆ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಣ ಸಂಸ್ಥೆ ಶ್ರಮಿಸುತ್ತಿದೆ. ಹಾಗಿದ್ದರೇ ಈ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ಸಾಧಕ ವಿದ್ಯಾರ್ಥಿಗಳು ಏನ ಹೇಳ್ತಾರೆ ಕೇಳಿ..
ಇನ್ನೂ ವಿದ್ಯಾರ್ಥಿಗಳಲ್ಲಿ ಮಾತ್ರವಲ್ಲದೆ ಪಾಲಕರಲ್ಲಿಯೂ ಒಂದು ಭವಿಷ್ಯದ ಕನಸು ಇದ್ದೇ ಇರುತ್ತದೆ. ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡುವ ಸದುದ್ದೇಶದಿಂದ ಪಾಲಕರು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಸಾಕಷ್ಟು ಶ್ರಮವಹಿಸುತ್ತಿದ್ದಾರೆ. ಅಂತಹ ಪಾಲಕರ ಕನಸನ್ನು ಸಾಕಾರಗೊಳಿಸುವ ಕಾರ್ಯವನ್ನು ಅರ್ಜುನ ಸೈನ್ಸ್ ಪಿಯು ಕಾಲೇಜು ಮಾಡುತ್ತಾ ಬಂದಿದೆ. ವಿಜ್ಞಾನ ವಿಭಾಗದಲ್ಲಿಯೇ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸಾಧನೆ ಮಾಡುತ್ತಿದೆ.
ಧಾರವಾಡದ ಟೋಲ್ ನಾಕಾ ಬಳಿಯಲ್ಲಿರುವ ಸರಸ್ವತಿಪುರದ ಶಾನಭಾಗ ಕಟ್ಟಡದಲ್ಲಿರುವ ಶಿಕ್ಷಣ ಸಂಸ್ಥೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೂಡ ಸಾಧನೆ ಮಾಡಿರುವುದು ವಿಶೇಷವಾಗಿದೆ. ಹಾಗಿದ್ದರೇ ಈ ಶಿಕ್ಷಣಕಾಶಿಯಲ್ಲಿರುವ ಅರ್ಜುನ ಸೈನ್ಸ್ ಕಾಲೇಜಿನ ಆಡಳಿತ ಮಂಡಳಿ ಏನ ಹೇಳ್ತಾರೆ ಕೇಳಿ.
ಒಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವನೆಯನ್ನು ಹುಟ್ಟು ಹಾಕಿ ಸಾಧನೆಯ ಶಿಖರದತ್ತ ಕೊಂಡೊಯ್ಯುವ ಮೂಲಕ ಶಿಕ್ಷಣ ಸೇವೆಯನ್ನು ಮಾಡುತ್ತಿರುವ ಅರ್ಜುನ ಸೈನ್ಸ್ ಪಿಯು ಕಾಲೇಜು ಈಗಾಗಲೇ ಸಾಕಷ್ಟು ಸಾಧನೆ ಮಾಡಿದ್ದು, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದ ಜೊತೆಗೆ ನೈತಿಕ ಮೌಲ್ಯಗಳ ನೆಲೆ ನಿಲ್ಲುವಂತೆ ಮಾಡಿ ಆದರ್ಶದ ಪ್ರಜೆಗಳನ್ನಾಗಿ ಮಾಡುವ ಮೂಲಕ ಶಿಕ್ಷಣ ಸಂಸ್ಥೆ ಶ್ರಮವಹಿಸುತ್ತಿದೆ. ಹಾಗಿದ್ದರೇ ಮತ್ತೇ ಯಾಕೆ ತಡ ಇಂದೇ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ ನಿಮ್ಮ ಉಜ್ವಲ ಭವಿಷ್ಯಕ್ಕೆ ಅಡಿಪಾಯ ಹಾಕಿ.
: ವಿಳಾಸ :
ಅರ್ಜುನ (ಶಾಂತಿನಿಕೇತನ)
ಸೈನ್ಸ್ ಪಿಯು ಕಾಲೇಜು, ಶಾನಭಾಗ ಬಿಲ್ಡಿಂಗ್
ಸರಸ್ವತಿಪುರ - ಟೋಲ್ ನಾಕಾ ಹತ್ತಿರ
ಧಾರವಾಡ.
Contact number :
8073371598 / 8073211871
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
03/08/2022 05:58 pm