ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಚೌಗುಲಾ ಶಿಕ್ಷಣ ಸಂಸ್ಥೆಯ ವಿದ್ಯಾನಿಕೇತನ ಪದವಿ ಪೂರ್ವ ವಿಜ್ಞಾನ ಕಾಲೇಜು 'ಕರ್ನಾಟಕ ಸಿಇಟಿ'(ಕೆ-ಸಿಇಟಿ)ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದಿದ್ದು, ಹುಬ್ಬಳ್ಳಿಯ ಕೀರ್ತಿಯನ್ನು ಇಮ್ಮಡಿಗೊಳಿಸಿದೆ.
ಹೌದು.. ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಾದ ಶ್ರೀಷಾ ಎಂ. ಬುಧ್ಯಾ (34), ರುಜುಲಾ ಆರ್. ಕಾಸ್ನಿಸ್ (42), ವಿಸ್ಮಿತಾ ವೈ (93), ಕೀರ್ತಿ ಎ. ಕರಾಳೆ (221), ಸಹನಾ ಬಸಪ್ಪ ಐನಾಪುರ (281), ನಂದನ ಜಿ. ಹೆಗಡೆ (349), ಚೇತನಾಶ್ರೀ ತಿಗಡಿ (663), ಡಿ.ಆರ್. ವಿಕಾಸ್ (684), ಸ್ಫೂರ್ತಿ ಶಿವಾನಂದ ದಾಸನಕೊಪ್ಪ (910), ಶ್ರೀಪಾದರಾಜ ಧಂಡೆಸುಗೂರ(965), ತೇಜಸ್ವಿನಿ ವಿ. ಹೂಗಾರ (1278), ಕಾರ್ತೀಕ ಜೆ. ಹಿರೇಮಠ (1361), ಅಪೂರ್ವ ಅಶೋಕ ಪಾಟೀಲ (1367), ಅಕ್ಷತಾ ಜೋಶಿ (1393), ಬಿಂದು ಮಹಾಂತೇಶ ನಾಗಶೆಟ್ಟಿ (1555), ದಿವ್ಯಶ್ರೀ ಶೆಟ್ಟಿ (1640), ಗೌರಿ ಎಸ್. ಕದಮ್ (1674), ಐಶ್ವರ್ಯಾ ಜಿ. ಗೊಬ್ಬನ್ನವರ (1681), ತನುಜಾ ಸವದತ್ತಿ (1782), ಬ್ರಾಹ್ಮಣಿ ಸಾಗರ ಬಜನ್ನವರ (1844), ವರುಣಕುಮಾರ ಎಸ್. ಹಿರೇಗೌಡರ (1864), ಪಾಟೀಲ ಸುಶೀಲ ಸೋಮನಾಥ (1913), ಅಪೇಕ್ಷಾ ಎಂ. ಬನ್ನಿಗಿಡದ (1942) ಅವರು ರ್ಯಾಂಕ್ ಗಳಿಸಿದ್ದಾರೆ.
ಇನ್ನೂ ಇದೇ ರೀತಿ 2001ರಿಂದ 5000 ಒಳಗೆ 91 ರ್ಯಾಂಕ್ ಗಳು ಹಾಗೂ 5001ರಿಂದ 10,000 ಒಳಗೆ 144 ರ್ಯಾಂಕ್ ಬಂದಿದ್ದು, ವಿದ್ಯಾರ್ಥಿಗಳ ಸಾಧನೆಗೆ ಮಹಾವಿದ್ಯಾಲಯದ ಪ್ರಾಚಾರ್ಯರು, ಆಡಳಿತ ಮಂಡಳಿ, ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.
Kshetra Samachara
01/08/2022 09:43 pm