ಕುಂದಗೋಳ : ನಮಸ್ಕಾರ ರೀ ಕುಂದಗೋಳ ಮಹಾಜನತೆ ಏನ್ರಿ ! ಮಕ್ಕಳ ಆಟ, ಪಾಠ, ಸಮಯಪ್ರಜ್ಞೆ ಹೇಳಬೇಕಾದ ಸರ್ಕಾರಿ ಶಾಲಿ ಮಾಸ್ತರ್ ಟೀಚರ್ ಸರಿಯಾದ ಸಮಯಕ್ಕೆ ನಿಮ್ಮೂರ ಶಾಲಿಗೆ ಬರಂಗಿಲ್ಲಾ ಅಂತಲ್ರೀ.
ಹೌದ ರೀ ! ಇದು ನಾವ್ ಹೇಳ್ತಿರೋ ಮಾತ್ ಅಲ್ಲರೀ ನೀವ್ ನಾಲ್ಕು ಹಳ್ಯಾಗ ಹೋಗಿ ರೈತಾಪಿ ಪಾಲಕರನ್ನು ಕೇಳ್ರಿ, ಮತ್ತ್ ಸ್ವತಃ ನೀವೂ ನೋಡ್ರಿ, ಈ ಸರ್ಕಾರಿ ಶಾಲಿ ಪ್ರಾರ್ಥನಾ ಸಮಯ 10 ಗಂಟೆ 30 ನಿಮಿಷಕ್ಕೆ ಕರೆಕ್ಟ್ ಹಾಜರ್ ಇರಬೇಕಾದ ಮಾಸ್ತರ್ ಯಪ್ಪಾ ! ಹನ್ನೊಂದು ಹನ್ನ್ಯಾಡ ಗಂಟೆವರೆಗೂ ಆರಾಮ ಪಾಲಿಗೆ ಬರ್ತಾರಂತ ಆ ಮ್ಯಾಲ್ 5 ಗಂಟೆ ಒಳಗಾಗಿ ಮನೀಗ್ ಓಡ್ತಾರಂತ.
ಛೇ,! ಛೇ,! ಹಿಂಗಾದ್ರ್ ಈ ಸರ್ಕಾರಿ ಶಾಲಿ ಮಕ್ಕಳು ಪಾಠಕ್ಕಿಂತ ಹೆಚ್ಚು ಹಿಂಗ್ ನೋಡ್ರಿಲ್ಲೇ ಹಿಂಗ್ ಆಟ ಆಡಿ ಮನೀಗ್ ಬರ್ತಾವು, ಆ ಮ್ಯಾಲ್ ಕೇಳ್ರಿ ಇದ್ ಒಂದು ಊರಿನ ಕಥೆ ಅಲ್ಲಾ ರೀ, ಸ್ವತಃ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಯಾ ಆಯಾ ಗ್ರಾಮಕ್ಕೆ ಭೇಟಿ ಕೊಟ್ಟ ಪರಿಶೀಲನೆ ಮಾಡಿ ನೋಡ್ರಿ.
ಅರೆ, ಈ ಸಮಸ್ಯೆ ಮೊದ್ಲ್ ನಾವ್ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹೋಗಿ ಹೇಳಿದ್ರ್, ಆ ಶಾಲಿ ಹೆಸರ ಹೇಳ್ರಿ ನಾವ್ ಸಪ್ರೈಜ್ ವಿಜಿಟ್ ಮಾಡ್ತಿವಿ ಅಂದ್ರು, ನಾವು ಹೆಸರು ಹೇಳಿ ಬಂದೀವಿ ಆದ್ರ ಮುಂದೆನಾಯ್ತು ಗೊತ್ತಿಲ್ಲ.
ಒಟ್ಟಾರೆ ಅತಿವೃಷ್ಟಿ ತಪ್ಪಿದ್ರೇ ಅನಾವೃಷ್ಟಿ, ಸಾಲ ಸೋಲಾ ಮಾಡಿ ನನ್ನ ಮಗಾ ಮಗಳು ಶ್ಯಾನೆ ಆಗಲಿ ಅಂತ್ಹೇಳಿ ಸರ್ಕಾರಿ ಶಾಲಿಗೆ ರೈತರು ತಮ್ಮ ಮಕ್ಕಳನ್ನು ಕಳಿಸ್ತಾರ್ ಆದ್ರೇ, ಈ ಶಿಕ್ಷಕರೇ ಸಮಯಪ್ರಜ್ಞೆ ಮರೆತ್ರೇ ಹೇಗೆ ?
ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
Kshetra Samachara
04/07/2022 10:36 pm