ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸ್ವಚ್ಛ ವಿದ್ಯಾಲಯ ಪುರಸ್ಕಾರ ಪ್ರಶಸ್ತಿ: ಸಂಸ್ಕಾರ ಆಂಗ್ಲ ಮಾಧ್ಯಮ ಶಾಲೆ ಪ್ರಥಮ ಸ್ಥಾನ

ಹುಬ್ಬಳ್ಳಿ: ಸ್ವಚ್ಛ ವಿದ್ಯಾಲಯ ಪುರಸ್ಕಾರ ಯೋಜನೆಯಡಿ 2021–22ನೇ ಸಾಲಿನ ಸ್ವಚ್ಛ ವಿದ್ಯಾಲಯ ಪುರಸ್ಕಾರ ಪ್ರಶಸ್ತಿಗೆ ಹುಬ್ಬಳ್ಳಿಯ 10 ಶಾಲೆಗಳು ಆಯ್ಕೆಯಾಗಿವೆ. ಅದೇ ರೀತಿ ನಗರದ ಕುಸುಗಲ್ ರಸ್ತೆಯಲ್ಲಿರುವ ಸಂಸ್ಕಾರ ಆಂಗ್ಲ ಮಾಧ್ಯಮ ಶಾಲೆ ಪ್ರಥಮ ಸ್ಥಾನ ಪಡೆದಿದೆ.

ಅದೇ ರೀತಿ ಲಕ್ಷ್ಮಣರಾವ್ ಪೈಕೋಟಿ ದ್ವಿತೀಯ, ರಾಜಧಾನಿ ಕಾಲೋನಿಯಲ್ಲಿರುವ ಜಿಎಚ್‌ಪಿಎಸ್ ಕೆಎಸ್‌ಆರ್‌ಟಿಸಿ ಶಾಲೆ ತೃತೀಯ, ಸುಕೃತಿ ಪ್ರಾಥಮಿಕ ಶಾಲೆ 4 ನೇ, ಕೆಎಲ್ಇ ಸೊಸೈಟಿ ಎಂ.ಆರ್ ಸಾಖರೆ ಆಂಗ್ಲ ಮಾಧ್ಯಮ ಶಾಲೆ 5 ನೇ, ಭವಾನಿನಗರದ ವಿಮಲಾ ಕುಲಕರ್ಣಿ ಮೆಮೋರಿಯಲ್ ಶಾಲೆ 6 ನೇ, ಸೇಂಟ್ ಆಂಟೋನಿ ಪಬ್ಲಿಕ್ ಸ್ಕೂಲ್ 7 ನೇ, ಒರಿಯಂಟಲ್ ಪ್ರಾಥಮಿಕ ಮತ್ತು ಪ್ರೌಢಶಾಲೆ 8 ನೇ, ರಾಜನಗರ ಕೇಂದ್ರೀಯ ವಿದ್ಯಾಲಯ 9 ನೇ, ಸ್ಥಾನ ಪಡೆದಿವೆ. ಈ ಎಲ್ಲ ಶಾಲೆಗಳಿಗೆ ಇಂದು ಅಂದರೆ ಜೂ.28 ರಂದು ಸಂಜೆ 4:00 ಗಂಟೆಗೆ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಹೊಸ ಸಭಾಭವನದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ.

Edited By : Nagaraj Tulugeri
Kshetra Samachara

Kshetra Samachara

28/06/2022 11:57 am

Cinque Terre

46.13 K

Cinque Terre

1

ಸಂಬಂಧಿತ ಸುದ್ದಿ