ಕುಂದಗೋಳ: ತಾಲೂಕಿನ ಕಮಡೊಳ್ಳಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಮಗ ಸಿದ್ದಲಿಂಗೇಶ್ ನಿಜಗುಣೇಶ್ ಹೂಗಾರ ಕೊರೊನಾ ವೈರಸ್ ಕಾಟ ನಡುವೆ ಮನೆಯಲ್ಲೇ ವಿದ್ಯಾಭ್ಯಾಸ ಮಾಡಿ ಇಡೀ ದೇಶಕ್ಕೆ ಮೆಡಿಕಲ್ ಪರೀಕ್ಷೆಯಲ್ಲಿ 967ನೇ ರ್‍ಯಾಂಕ್ ಪಡೆದಿದ್ದರು.
ಇದೀಗ ನಿಜಗುಣೇಶ್ ಹೂಗಾರ ಸಾಧನೆಯನ್ನು ಗುರುತಿಸಿದ ಗದುಗಿನ ಪುಟ್ಟರಾಜ ಗವಾಯಿಗಳು ತಮ್ಮ ಮಠದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಗದುಗಿನ ಪುಟ್ಟರಾಜ ಗವಾಯಿಗಳ ಮಠದ ವೇದಿಕೆಯಲ್ಲಿ ಕಲ್ಲಯ್ಯಜ್ಜನವರು ವಿವಿಧ ಮಠಾಧೀಶರ ಸಮ್ಮುಖದಲ್ಲಿ ಸನ್ಮಾನಿಸಿದರು ಹಾಗೂ ಉತ್ತಮ ಸಾಧಕ ಪ್ರಶಸ್ತಿ ಪ್ರದಾನಿಸಿ, ಯಾವುದೇ ತರಬೇತಿ ಪಡೆಯದೆ ಮಾಡಿದ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದರು.
ಮೆಡಿಕಲ್ ನಲ್ಲಿ 967ನೇ ರ್‍ಯಾಂಕ್ ಪಡೆದ ಸಿದ್ದಲಿಂಗೇಶ್ ತಾಯಿ ಕಮಡೊಳ್ಳಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಆಗಿದ್ದು, ತಂದೆ ಸಂಗೀತಗಾರರಾಗಿದ್ದಾರೆ.
Kshetra Samachara
22/06/2022 09:44 pm