ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಒಂಬತ್ತು ಚಿನ್ನದ ಪದಕಕ್ಕೆ ಮುತ್ತಿಕ್ಕಿದ ಸುಜಾತಾ

ಧಾರವಾಡ: ಬಡತನ ಎಂದಿಗೂ ಸಾಧನೆಗೆ ಅಡ್ಡಿಯಾಗೋದಿಲ್ಲ ಅನ್ನೋದನ್ನ ಈ ಯುವತಿ ಸಾಬೀತುಪಡಿಸಿದ್ದಾಳೆ. ಪತ್ರಿಕೋದ್ಯಮ ವಿಭಾಗದಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆಯುವ ಮೂಲಕ ಚಿನ್ನದ ಹುಡುಗಿ ಅನ್ನೋ ಬಿರುದು ಪಡೆದುಕೊಂಡಿದ್ದಾಳೆ. ಹಾಗಾದ್ರೆ ಯಾರು ಆ ಯುವತಿ? ಅವಳು ಮಾಡಿದ ಸಾಧನೆ ಏನು ಗೊತ್ತಾ? ಹಾಗಾದ್ರೆ ಈ ಸ್ಪೆಷಲ್ ಸ್ಟೋರಿ ನೋಡಿ.

ಹೀಗೆ ಒಂದಲ್ಲ ಎರಡಲ್ಲ ಒಟ್ಟು ಒಂಬತ್ತು ಚಿನ್ನದ ಪದಕಕ್ಕೆ ಮುತ್ತಿಡುತ್ತಿರೋ ಈ ಯುವತಿ ಸಾಧನೆ ನಿಜಕ್ಕೂ ಎಲ್ಲರನ್ನ ಅಚ್ಚರಿಗೊಳಿಸುತ್ತೆ. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸೂಳಿಕಟ್ಟಿ ಗ್ರಾಮದವಳಾದ ಸುಜಾತಾ ಜೋಡಳ್ಳಿ ಸದ್ಯ ಚಿನ್ನದ ಹುಡುಗಿಯಾಗಿದ್ದಾಳೆ.. ಕರ್ನಾಟಕ ವಿಶ್ವ ವಿದ್ಯಾಲಯದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಖುದ್ದು ರಾಜ್ಯಪಾಲರೇ ಅಚ್ಛರಿಗೊಳಗಾಗುವಂತೆ ಮಾಡಿದ್ದಾಳೆ. ಪತ್ರಿಕೋದ್ಯಮ ವಿಭಾಗದಲ್ಲಿ ಅತೀ ಹೆಚ್ಚು ಚಿನ್ನದ ಪದಕವನ್ನು ಗಿಟ್ಟಿಸಿಕೊಳ್ಳುವುದರ ಮೂಲಕ 2022ರ ವಿಶ್ವ ವಿದ್ಯಾಲಯದ ಚಿನ್ನದ ಹುಡುಗಿಯಾಗಿ ಹೊರಹೊಮ್ಮಿದ್ದಾಳೆ. 9 ಚಿನ್ನದ ಪದಕಕ್ಕೆ ಮುತ್ತಿಟ್ಟು ತನ್ನ ಬಡತನವನ್ನೇ ಈಕೆ ಮೆಟ್ಟಿ ನಿಂತು ಸಾಧನೆಗೈದಿದ್ದಾಳೆ.

ಗ್ರಾಮ ಪಂಚಾಯತ ಡಿ ದರ್ಜೆ ನೌಕರರಾಗಿರುವ ನಾಗೇಶ ಜೋಡಳ್ಳಿ ಮತ್ತು ಮಹಾದೇವಿ ಅವರ ಮಗಳಾದ ಸುಜಾತಾ, ಎಂ.ಎ ಪತ್ರಿಕೋದ್ಯಮ ಪದವಿಯಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸಿ, ಒಂಬತ್ತು ಚಿನ್ನದ ಪದಕ ಪಡೆದಿದ್ದಾಳೆ. ಮನೆಯಲ್ಲಿ ಬಡತನ ಇದ್ದರೂ ಅದ್ಯಾವುದೂ ಸಾಧನೆಗೆ ಅಡ್ಡಿಯಾಗದು ಅನ್ನೋ ದೃಢ ನಿರ್ಧಾರದ ಮೂಲಕ 9 ಚಿನ್ನದ ಪದಕ ಪಡೆದು ಸಾಧನೆ ಮಾಡಿದ್ದಾಳೆ. ಮಗಳ ಈ ಸಾಧನೆಗೆ ತಂದೆ, ತಾಯಿ ಸಂತಸ ವ್ಯಕ್ತಪಡಿಸಿದ್ದು ಸಾಧನೆಯನ್ನು ಕೊಂಡಾಡಿದ್ದಾರೆ.

ಒಟ್ಟಾರೆ ಬಡತನದಲ್ಲೇ ಕಲಿತು ಹೊಸ ದಾಖಲೆ ಮಾಡಿದ ವಿದ್ಯಾರ್ಥಿನಿಗೆ ಸ್ನೇಹಿತರು, ಗುರುಗಳು ಶುಭಾಶಯ ಹೇಳಿ ಖುಷಿ ಹಂಚಿಕೊಂಡರು. ಸುಜಾತಾ ಮುಂದಿನ ದಿನಗಳಲ್ಲಿ ಪತ್ರಿಕೋದ್ಯಮದಲ್ಲೇ ಮತ್ತೊಂದು ಸಾಧನೆ ಮಾಡುವ ಉತ್ಸಾಹ ಹೊಂದಿದ್ದು ಆಕೆಯ ಮುಂದಿನ ಜೀವನ ಸಾಧನೆಯತ್ತ ಸಾಗಲಿ ಎಂಬುದೇ ನಮ್ಮ ಆಶಯ.

Edited By :
Kshetra Samachara

Kshetra Samachara

07/06/2022 07:37 pm

Cinque Terre

62.93 K

Cinque Terre

7

ಸಂಬಂಧಿತ ಸುದ್ದಿ