ಹುಬ್ಬಳ್ಳಿ: ಜಗತ್ತು ಹೊಸ ವಿದ್ಯಮಾನದೆಡೆಗೆ ತೆರೆಯುತ್ತಿದೆ. ಪ್ರತಿಯೊಂದರಲ್ಲೂ ಸ್ಪರ್ಧೆ ಇದೆ. ರಾಜ್ಯ, ರಾಷ್ಟ್ರ, ಅಂತರ್ರಾಷ್ಟ್ರ ಮಟ್ಟದ ಸಾಧನೆ ಹುಮ್ಮಸ್ಸಿಗೆ ಈಗ ದೇಶಪಾಂಡೆ ಫೌಂಡೇಶನ್ ಸ್ಕಿಲ್ ಪ್ಲಸ್ ಆರ್ ಶಿಕ್ಷಣ ರಹದಾರಿಯಾಗಿದೆ.
ಬಿಎ, ಬಿಕಾಮ್, ಬಿ.ಎಸ್ಸಿ, ಡಿಪ್ಲೋಮಾ, ಬಿಸಿಎ, ಎಂಬಿಎ, ಇಂಜಿನಿಯರಿಂಗ್, ಐಟಿಐ, ಮುಗಿಸಿ ಉದ್ಯೋಗ ಅರಸುವ ಪದವೀಧರನ್ನು ಯಾವುದೇ ಮಲ್ಟಿ ನ್ಯಾಷನಲ್ ಕಂಪನಿಗೆ ಸೆಡ್ಡು ಹೊಡೆಯಬಲ್ಲ ಜಾಣ್ಮೆ, ಆಟಿಟ್ಯುಡ್, ಇಂಗ್ಲಿಷ್ ಸ್ಪೀಕಿಂಗ್ ಸ್ಕಿಲ್, ಬ್ಯುಸಿನೆಸ್ ನಾಲೇಡ್ಜ್ ಅನುಭವದ ನಾಲ್ಕು ತಿಂಗಳ ತರಬೇತಿ ನೀಡಿ, ಪ್ಲೇಸಮೇಂಟ್ ಮೂಲಕ ಶೇಕಡ ನೂರಕ್ಕೆ ನೂರರಷ್ಟು ಉದ್ಯೋಗ ನೀಡಬಲ್ಲ ದೇಶಪಾಂಡೆ ಫೌಂಡೇಶನ್ ತರಬೇತಿಯೆ, ಸ್ಕಿಲ್ ಪ್ಲಸ್ ಆರ್ ಫೆಲೋಶಿಪ್.
ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಶನ್ನಲ್ಲಿ 2022 ರಲ್ಲಿ ಆರಂಭವಾದ ಸ್ಕಿಲ್ ಪ್ಲಸ್ ಆರ್ ತರಬೇತಿಯಲ್ಲಿ ಕಾಮರ್ಸ್ (ಕೌಟಿಲ್ಯ) ಫೆಲೋಶಿಪ್ ಒಳಗೆ ಒಟ್ಟು ಒಂಬತ್ತು ಗ್ರೂಪ್ನ 350 ಯುವಕ ಯುವತಿಯರು ತರಬೇತಿಯಲ್ಲಿದ್ದು ಅವರ ಫೆಲೋಶಿಪ್ ಅನುಭವದ ಅಭಿಪ್ರಾಯ ಹೀಗಿದೆ.
ಯಾವುದೇ ಕಾರ್ಪೋರೇಟ್, ಮಲ್ಟಿ ನ್ಯಾಷನಲ್, ಸಾಪ್ಟ್ ವೇರ್, ಇಂಟರ್ನ್ಯಾಷನಲ್ ಕಂಪನಿಗೆ ಬೇಕಾದ ಸಂಪೂರ್ಣ ತರಬೇತಿ ಪುರುಷರಷ್ಟೇ ಮಹಿಳೆಯರಿಗೂ ಪ್ರಾಶಸ್ತ್ಯವನ್ನ ದೇಶಪಾಂಡೆ ಫೌಂಡೇಶನ್ ಫೆಲೋಶಿಪ್ ನೀಡಿದೆ.
ಈಗಾಗಲೇ ದೇಶಪಾಂಡೆ ಫೇಲೊಶಿಪ್ ತರಬೇತಿ ಮುಗಿಸಿದ ಅದೆಷ್ಟೋ ಯುವಕ ಯುವತಿಯರ ಉದ್ಯೋಗದ ಕನಸಿಗೆ ರೆಕ್ಕೆ ಕಟ್ಟಿದ ದೇಶಪಾಂಡೆ ಫೌಂಡೇಶನ್ ಸ್ವಂತ ಉದ್ಯೋಗಕ್ಕೂ ನೆರವಾಗಿ 300 ಕ್ಕೂ ಹೆಚ್ಚು ಕಂಪನಿ ಪ್ಲೇಸಮೇಂಟ್ ಫೆಲೋಶಿಪ್ ತರಬೇತುದಾರರಿಗೆ ಪರಿಚಯಿಸಿದೆ.
ಒಟ್ಟಾರೆ ದೇಶಪಾಂಡೆ ಫೌಂಡೇಶನ್ ಫೆಲೋಶಿಪ್ ರಾಜ್ಯಾದ್ಯಂತ ಕಾಲೇಜು ಶಿಕ್ಷಣ ಮುಗಿಸಿದ ಯುವಕ ಯುವತಿಯರಿಗೆ ಉದ್ಯೋಗ ಶಿಕ್ಷಣದ ಕಣಜವಾಗಿ ಗ್ರಾಮೀಣ ನಗರ ಮಕ್ಕಳನ್ನು ವಿಶ್ವಕ್ಕೆ ತೆರೆದಿಡುತ್ತಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
28/05/2022 09:47 pm