ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಉತ್ಕೃಷ್ಟ ಶಿಕ್ಷಣಕ್ಕಾಗಿ ಕೆ.ಎಚ್ ಪಾಟೀಲ್ ಕಾಲೇಜು

ಹುಬ್ಬಳ್ಳಿ: ಎಸ್‌ಎಸ್‌ಎ‌ಲ್‌ಸಿ ಮತ್ತು ಪಿಯುಸಿ. ಇವೆರಡು ಶೈಕ್ಷಣಿಕ ಬದುಕಿನ ಮಹತ್ವದ ಘಟ್ಟಗಳು‌. ಈ ಬುನಾದಿ ಗಟ್ಟಿಮುಟ್ಟಾಗಿ ಸಿಕ್ಕರೆ ಮುಂದಿನ ಹಾದಿ ಸುಗಮವಾಗುತ್ತೆ. ಹೀಗಾಗಿ ಮಹತ್ವದ ಶೈಕ್ಷಣಿಕ ಘಟ್ಟವಾದ ಪಿಯುಸಿ ಶಿಕ್ಷಣವನ್ನು ಬಹಳ ಅಚ್ಚುಕಟ್ಟಾಗಿ, ಶಿಸ್ತುಬದ್ಧವಾಗಿ ನೀಡಬೇಕು. ಹುಬ್ಬಳ್ಳಿಯ ವೇಮನ ವಿದ್ಯಾವರ್ಧಕ ಸಂಘದ ಕೆ.ಎಚ್ ಪಾಟೀಲ್ ಪಿಯು ಕಾಲೇಜು ಪಿಯುಸಿ ವಿದ್ಯಾರ್ಥಿಗಳಿಗೆ ಸರಳ ಹಾಗೂ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಸಂಕಲ್ಪ ತೊಟ್ಟಿದೆ.

ವಿದ್ಯಾ ಸಂಸ್ಥೆ ಎಂದರೆ ಅಲ್ಲಿ ಶೈಕ್ಷಣಿಕ‌ ವಾತಾವರಣ, ಉತ್ತಮ ಕಟ್ಟಡ, ಸುಸಜ್ಜಿತ ತರಗತಿಗಳು, ಪ್ರಯೋಗಾಲಯ, ಆಟದ ಮೈದಾನ ಇದೆಲ್ಲ ಬೇಕೇ ಬೇಕು. ಹೀಗಾಗಿ ಕೆ.ಎಚ್ ಪಾಟೀಲ್ ಕಾಲೇಜಿನ ಆಡಳಿತ ಮಂಡಳಿ ಈ ಎಲ್ಲ ಸೌಲಭ್ಯಗಳನ್ನು ವಿದ್ಯಾರ್ಥಿಗಳಿವೆ ಒದಗಿಸಿದೆ.‌

ಪ್ರತಿ ವಿದ್ಯಾರ್ಥಿಯ ಮಾನಸಿಕತೆಯನ್ನು ಅರಿತುಕೊಂಡು ಪಾಠ ಬೋಧಿಸುವ ಅನುಭವಿ ಮತ್ತು ನುರಿತ ಶಿಕ್ಷಕ ಸಿಬ್ಬಂದಿ ಇಲ್ಲಿದ್ದಾರೆ. ಭೌತಶಾಸ್ತ್ರ, ಜೀವಶಾಸ್ತ್ರ, ರಾಸಾಯನಶಾಸ್ತ್ರ, ಹಾಗೂ ಕಂಪ್ಯೂಟರ್ ತರಬೇತಿಗಾಗಿ ಪ್ರತ್ಯೇಕ ಪ್ರಯೋಗಾಲಯಗಳು ಇಲ್ಲಿವೆ‌. ಈ ಪ್ರಯೋಗಾಲಯಗಳಲ್ಲಿ ಇರುವ ಅತ್ಯಾಧುನಿಕ ಉಪಕರಣಗಳು ವಿದ್ಯಾರ್ಥಿಗಳ ಕಲಿಕೆಗೆ ಮಗದಷ್ಟು ಪೂರಕವಾಗಿವೆ.

ಇನ್ನು ಇಲ್ಲಿ ಕಲಿತ ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶಿಕ್ಷಕ ವರ್ಗದ ನಿರೀಕ್ಷೆಗೂ ಮೀರಿ ಫಲಿತಾಂಶ ಪಡೆದಿದ್ದಾರೆ. ಆ ಮೂಲಕ ತಮ್ಮ ಪೋಷಕರು ಹಾಗೂ ಕಾಲೇಜಿನ ಕೀರ್ತಿ ಬೆಳಗಿದ್ದಾರೆ.‌

ಜತೆಗೆ ಪಿಯು ನಂತರದ ಸಿ‌ಇಟಿ, ಐಐಟಿ, ಜೆಇ‌ಇ, ನೀಟ್, ಸೇರಿ ಹಲವು ಪ್ರವೇಶ ಪರೀಕ್ಷೆಗಳಿಗೆ ಪರಿಣಿತ ಬೋಧಕರಿಂದ ಇಲ್ಲಿ ಮಾರ್ಗದರ್ಶನ ದೊರೆಯುತ್ತಿದೆ‌.

ಇಷ್ಟೆಲ್ಲ ವೈಶಿಷ್ಟ್ಯಗಳು ಹಾಗೂ ಶೈಕ್ಷಣಿಕ ಪೂರಕ ವಾತಾವರಣ ಹೊಂದಿರುವ ಕೆ.‌ ಎಚ್ ಪಾಟೀಲ್ ಕಾಲೇಜಿನಲ್ಲಿ ಪ್ರಸಕ್ತ ವರ್ಷಕ್ಕೆ ಪ್ರವೇಶಗಳು ಆರಂಭವಾಗಿವೆ. ಎಸ್‌ಎಸ್‌ಎ‌ಲ್‌ಸಿ ಪೂರೈಸಿದ ನಿಮ್ಮ ಮಕ್ಕಳನ್ನು ಕೆ.ಎಚ್ ಪಾಟೀಲ್ ಕಾಲೇಜಿಗೆ ಪ್ರವೇಶಾತಿ ನೀಡಿ ಬಂಗಾರ ಭವಿಷ್ಯ ರೂಪಿಸಿ..

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

25/05/2022 03:20 pm

Cinque Terre

45.77 K

Cinque Terre

1

ಸಂಬಂಧಿತ ಸುದ್ದಿ