ಅಣ್ಣಿಗೇರಿ: ಪಟ್ಟಣದ ಐಶ್ವರ್ಯ ವೈದ್ಯಮಠ ಎಂಬ ಬಾಲಕಿ SSLC ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನಗಳಿಸಿದ್ದು ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ.
619/ 99.04 ಅಂಕ ಪಡೆದು ತಾಲೂಕು ಸೇರಿದಂತೆ ಪಟ್ಟಣದ ಬಾಪೂಜಿ ವಿದ್ಯಾನಿಕೇತನಕ್ಕೆ ಪ್ರಥಮ ಸ್ಥಾನ ಪಡೆದಿರುತ್ತಾಳೆ.ಇನ್ನೂ ಈ ಬಾಲಕಿಯ ಫಲಿತಾಂಶ ತಿಳಿದು ಕೂಡಲೇ ಪ್ರಾಂಶುಪಾಲರಾದ ಎನ್.ಡಿ. ಧಾರವಾಡ ಗುರುಗಳು ಸೇರಿದಂತೆ ಶಾಲೆಯ ಆಡಳಿತ ವರ್ಗ ಬಾಲಕಿ ಐಶ್ವರ್ಯ ವೈದ್ಯ ಮಠ ಅವಳಿಗೆ ಶುಭಾಶಯಗಳನ್ನು ತಿಳಿಸಿ ಸಿಹಿ ತಿನಿಸಿದರು .
ಶಾಲೆಯ ಪ್ರಾಂಶುಪಾಲರಾದ ಎನ್.ಡಿ. ಧಾರವಾಡ ಗುರುಗಳು ಮಾತನಾಡಿ, ಬಾಲಕಿ ಸಾಧನೆ ಮಾಡಿದ್ದು ನಮಗೆಲ್ಲರಿಗೂ ಸಂತೋಷವಾಗಿದೆ. ಐಶ್ವರ್ಯ ವೈದ್ಯಮಠ ಬಾಲಕಿಯ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.
ಭವಿಷ್ಯದಲ್ಲಿ ತಾಯಿಯ ತರ ವೈದ್ಯ ಆಗಬೇಕೆಂಬುದು ಐಶ್ವರ್ಯ ವೈದ್ಯಮಠ ಆಸೆ ಈಡೇರಲಿ ಎಂದು ಪಬ್ಲಿಕ್ ನೆಕ್ಸ್ಟ್ ಹಾರೈಸುತ್ತದೆ.
Kshetra Samachara
21/05/2022 04:47 pm