ಕುಂದಗೋಳ: ಎಸ್ಎಸ್ಎಲ್‌ಸಿ ಮಕ್ಕಳ ಪರೀಕ್ಷೆಗಳು ಇಂದು ಯಶಸ್ವಿಯಾಗಿ ಮುಕ್ತಾಯ ಕಂಡಿದ್ದು, ನಗುಮೊಗದಿಂದಲೇ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಭವಿಷ್ಯದ ಶಿಕ್ಷಣದ ಕನಸು ಕಾಣುತ್ತಾ ಮನೆ ಕಡೆ ಹೆಜ್ಜೆ ಹಾಕಿದರು.
ಕುಂದಗೋಳ ತಾಲೂಕಿನಲ್ಲಿ ನಡೆದ ಎಂಟು ಪರೀಕ್ಷಾ ಕೇಂದ್ರಗಳ ಕೊನೆಯ ವಿಜ್ಞಾನ ಪರೀಕ್ಷೆಯಲ್ಲಿ ಒಟ್ಟು 2257 ವಿದ್ಯಾರ್ಥಿಗಳ ಪೈಕಿ 2229 ವಿದ್ಯಾರ್ಥಿಗಳು ಪರೀಕ್ಷೆ ಬರೆದು ಮುಂದಿನ ಶಿಕ್ಷಣದ ಕನಸು ಕಾಣುತ್ತಾ ಪಬ್ಲಿಕ್ ನೆಕ್ಸ್ಟ್ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು ಹೀಗೆ.
ಒಟ್ಟಾರೆ ಕೋವಿಡ್ ಹಾವಳಿ ನಡುವೆ ಕಳೆದೆರೆಡು ವರ್ಷಗಳಿಂದ ಗೊಂದಲ ಎದುರಿಸಿದ್ದ ಮೆಟ್ರಿಕ್ ಪರೀಕ್ಷೆಗಳು ಈ ವರ್ಷ ಸೂಸೂತ್ರವಾಗಿ ನೆರವೇರಿದೆ. ಪರೀಕ್ಷೆ ಮುಗಿಸಿದ ವಿದ್ಯಾರ್ಥಿಗಳು ಶಿಕ್ಷಕರು ಜೊತೆ ಪ್ರಶ್ನೆ ಪತ್ರಿಕೆ ಕುರಿತು ಚರ್ಚಿಸುವ ದೃಶ್ಯಗಳು ಕಂಡು ಬಂದವು. ಬಳಿಕ ಮಧ್ಯಾಹ್ನದ ಬಿಸಿಯೂಟ ಸವಿದ ಮಕ್ಕಳು ತಮ್ಮ ತಮ್ಮ ಶಾಲಾ ವಾಹನ ಏರಿ ತಮ್ಮ ಪ್ರಯಾಣ ಊರ ಕಡೆ ಮುಂದುವರೆಸಿದರು.
Kshetra Samachara
11/04/2022 04:51 pm