ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಹಾಲ್‌ ಟಿಕೆಟ್‌ ಪಡೆಯಲು ವಿದ್ಯಾರ್ಥಿಗಳ ಪರದಾಟ

ಧಾರವಾಡ: ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಓದುತ್ತಿರುವ ನಾಲ್ಕು ಜನ ವಿದ್ಯಾರ್ಥಿಗಳು ಹಾಲ್ ಟಿಕೆಟ್ ಪಡೆಯಲು ಪ್ರತಿಭಟನೆ ನಡೆಸಬೇಕಾದ ಪ್ರಸಂಗ ಗುರುವಾರ ನಡೆದಿದೆ.

ಹೌದು! ಹಾಜರಾತಿ ಕಡಿಮೆ ಇದೆ ಎನ್ನುವ ಕಾರಣಕ್ಕೆ ನಾಲ್ಕು ವಿದ್ಯಾರ್ಥಿಗಳಿಗೆ ಪತ್ರಿಕೋದ್ಯಮ ವಿಭಾಗದ ಮೂರನೇ ಸೆಮಿಸ್ಟರ್‌ನ ಹಾಲ್ ಟಿಕೆಟ್ ನೀಡದೇ ಇದ್ದದ್ದರಿಂದ ವಿದ್ಯಾರ್ಥಿಗಳು ಕರ್ನಾಟಕ ವಿಶ್ವವಿದ್ಯಾಲಯದ ಆಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.

ಹಾಜರಾತಿ ಕಡಿಮೆ ಇದೆ ಹಾಲ್ ಟಿಕೆಟ್ ಕೊಡಲು ಬರುವುದಿಲ್ಲ ಎಂದು ಮೊದಲೇ ಹೇಳಬೇಕಿತ್ತು. ಆದರೆ, ಪರೀಕ್ಷಾ ಶುಲ್ಕ ಮತ್ತು ಕಾಲೇಜು ಶುಲ್ಕ ಭರಿಸಿಕೊಂಡ ಮೇಲೆ ಹಾಲ್ ಟಿಕೆಟ್ ಕೊಡಲು ಬರುವುದಿಲ್ಲ ಎಂದು ಶಿಕ್ಷಕರು ಹೇಳುತ್ತಿದ್ದಾರೆ. ಈ ಬಗ್ಗೆ ನಾವು ಮುಖ್ಯಮಂತ್ರಿಗಳಿಗೆ ಮತ್ತು ರಾಜ್ಯಪಾಲರಿಗೆ ಪತ್ರ ಬರೆದಿದ್ದೇವೆ. ಸಿಎಂ ಕಚೇರಿಯಿಂದ ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ಕೊಟ್ಟು ಪರೀಕ್ಷೆ ಅವಕಾಶ ಮಾಡಿಕೊಡಬೇಕು ಎಂದು ಪ್ರತ್ಯುತ್ತರ ಕೂಡ ಬಂದಿದೆ. ಆದರೆ, ಆಡಳಿತ ಮಂಡಳಿಯವರು ನಾವು ರಾಜ್ಯಪಾಲರಿಗೆ ಪತ್ರ ಬರೆದಿದ್ದನ್ನೇ ನೆಪವಾಗಿರಿಸಿಕೊಂಡು ಹಾಲ್ ಟಿಕೆಟ್ ಕೊಡುತ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿ ಪ್ರತಿಭಟನೆ ನಡೆಸಿದರು.

ಕೆಲ ಕಾಲ ಇವರ ಸಮಸ್ಯೆ ಆಲಿಸಿದ ಆಡಳಿತ ಮಂಡಳಿವರು, ಈ ಬಗ್ಗೆ ಪರಿಶೀಲನೆ ನಡೆಸಿ ಮುಂದಿನ ಪರೀಕ್ಷೆಗೆ ಅನುವು ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ.

Edited By :
Kshetra Samachara

Kshetra Samachara

17/03/2022 01:43 pm

Cinque Terre

22.27 K

Cinque Terre

0

ಸಂಬಂಧಿತ ಸುದ್ದಿ