ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಹುತಾತ್ಮರ ದಿನ ಸಿ.ಆಯ್.ಸಿ ಕಾಲೇಜು ವಿದ್ಯಾರ್ಥಿಗಳ ಶ್ರಮದಾನ

ಕುಂದಗೋಳ : ಇಂದು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹುತಾತ್ಮರಾದ ದಿನ ಈ ದಿನದ ಅಂಗವಾಗಿ ಇಲ್ಲೋಂದು ಕಾಲೇಜು ವಿದ್ಯಾರ್ಥಿಗಳು "ರಾಷ್ಟ್ರೀಯ ಸ್ವಚ್ಚತಾ ದಿನವನ್ನಾಗಿ" ತಮ್ಮ ಶ್ರಮದಾನದ ಮೂಲಕ ಆಚರಿಸಿ ಅದರಗುಂಚಿ ಗ್ರಾಮದ ದೇವಸ್ಥಾನ ಹಾಗೂ ಮಸೀದಿಗಳನ್ನು ಸ್ವಚ್ಚತೆಯನ್ನು ಮಾಡಿ ಗ್ರಾಮಸ್ಥರ ಮೆಚ್ಚುಗೆ ಗಳಿಸಿದರು.

ಹೌದು ! ಸಿ.ಆಯ್.ಸಿ ಕಾಲೇಜಿನ ಎಂಕಾಂ ವಿದ್ಯಾರ್ಥಿಗಳು ಅದರಗುಂಚಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ವಿ.ಕಳ್ಳಿಮನಿ ಹಾಗೂ ಸಿ.ಆಯ್.ಸಿ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಆರ್.ಎಫ್.ಭರಯಗೌಡ್ರರವರು ಎನ್.ಎಸ್.ಎಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಕಾಲೇಜು ವಿದ್ಯಾರ್ಥಿಗಳ ಎನ್.ಎಸ್.ಎಸ್ ಜಾಥಾ ಆರಂಭಿಸಿ ಅದರಗುಂಚಿ ಗ್ರಾಮದ ದೊಡ್ಡೇಶ್ವರ ದೇವಸ್ಥಾನ ತಲುಪಿ ಸ್ವಚ್ಚತಾ ಕಾರ್ಯ ಆರಂಭಿಸಿದರು.

ಅದರಂತೆ ಅದರಗುಂಚಿ ಗ್ರಾಮದ ಬಸ್ ನಿಲ್ದಾಣ ಹಾಗೂ ಮಸೀದಿಗಳನ್ನು ಸಹ ಸ್ವಚ್ಚತೆ ಮಾಡಿ ತಮ್ಮ ಶ್ರಮದಾನ ಮೆರೆದರು. ಬಳಿಕ ದೇವರಿಗೆ ಪ್ರಾರ್ಥನೆ ಸಲ್ಲಿಸಿ ಕೋವಿಡ್ ಮಹಾಮಾರಿ ದೂರ ಮಾಡುವಂತೆ ಪ್ರಾರ್ಥನೆ ಸಲ್ಲಿಸಿದರು.

Edited By : Nirmala Aralikatti
Kshetra Samachara

Kshetra Samachara

30/01/2022 08:43 pm

Cinque Terre

18.96 K

Cinque Terre

0

ಸಂಬಂಧಿತ ಸುದ್ದಿ