ಹುಬ್ಬಳ್ಳಿ: ತಮ್ಮ ಮಕ್ಕಳು ಉನ್ನತ ಶಿಕ್ಷಣ ಪಡೆದು ಡಾಕ್ಟರ್, ಇಂಜಿನಿಯರ್, ವಿಜ್ಞಾನಿ ಅಥವಾ ತಂತ್ರಜ್ಞಾನಿ ಆಗಬೇಕು ಎಂದು ಬಹುತೇಕ ಪಾಲಕರು ಆಶಿಸುತ್ತಾರೆ, ಅದೇ ರೀತಿ ವಿದ್ಯಾರ್ಥಿಗಳೂ ಪಾಲಕರ ಕನಸನ್ನು ನನಸು ಮಾಡಲು ವಿದ್ಯಾರ್ಜನೆಗೆ ಮುಂದಾಗಿರುತ್ತಾರೆ. ಆದರೆ ಅವರಿಗೆ ಸೂಕ್ತ ಪರೀಕ್ಷಾ ಪೂರ್ವ ತರಬೇತಿ ಮಾರ್ಗದರ್ಶನ ಅತಿ ಮುಖ್ಯ. ಆ ಕಾರ್ಯವನ್ನು ಯಶಸ್ವಿಯಾಗಿ ಪೂರೈಸುತ್ತ ಬಂದಿದೆ ವಾಣಿಜ್ಯನಗರಿ ಹುಬ್ಬಳ್ಳಿಯ ಪ್ರತಿಷ್ಠಿತ ಆಕಾಶ್ ಇನ್ ಸ್ಟಿಟ್ಯೂಟ್.
ಹೌದು..JEE, NEET, K-CET,IIT ಸೇರಿದಂತೆ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾದ ತರಬೇತಿಯನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದೆ. 1988ರಲ್ಲಿಯೇ ಆರಂಭಗೊಂಡ ಆಕಾಶ್ ಇನ್ ಸ್ಟಿಟ್ಯೂಟ್ ಹುಬ್ಬಳ್ಳಿಯಲ್ಲಿ 2016ರಂದು ಕಾರ್ಯಾರಂಭ ಮಾಡಿದೆ. ಈಗಾಗಲೇ 4-5 ಲಕ್ಷ ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿದೀಪವಾಗಿ MEDICAL, IIT, JEE ಫೌಂಡೇಶನ್ ಈಗ ದೇಶಾದ್ಯಂತ 220ಕ್ಕೂ ಹೆಚ್ಚು ಸೆಂಟರ್ ಗಳನ್ನು ಹೊಂದಿದೆ.
ಅಲ್ಲದೇ ಸುಸಜ್ಜಿತ ಕಟ್ಟಡದಲ್ಲಿ ತರಬೇತಿ ನೀಡುತ್ತಿರುವ ಸಂಸ್ಥೆಯು ಆಧುನಿಕ ತಂತ್ರಜ್ಞಾನದ ಸ್ಮಾರ್ಟ್ ಕ್ಲಾಸ್, ನುರಿತ ಬೋಧಕ ಸಿಬ್ಬಂದಿ, ಆಧುನಿಕ ತಂತ್ರಜ್ಞಾನದ ಜೊತೆಗೆ ಸಾಕಷ್ಟು ಪುಸ್ತಕ ಭಂಡಾರವನ್ನು ಹೊಂದಿರುವ ಆಕಾಶ್ ಇನ್ ಸ್ಟಿಟ್ಯೂಟ್ ಈಗ ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ ಕಾರ್ಯವನ್ನು ಮಾಡುತ್ತ ಮುನ್ನಡೆದಿದೆ. ಇನ್ನೂ ಸಂಸ್ಥೆ ಕುರಿತು ವಿದ್ಯಾರ್ಥಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
1988ರಲ್ಲಿ ಜಿ.ಸಿ.ಚೌಧರಿ ಸ್ಥಾಪನೆ ಮಾಡಿರುವ ಆಕಾಶ್ MEDICAL, IIT, JEE ಫೌಂಡೇಶನ್ ಪ್ರತಿವರ್ಷ ಇಪ್ಪತ್ತು ಬ್ಯಾಚ್ ಗಳಿಗೆ ತರಬೇತಿ ನೀಡತ್ತಿದೆ. ಈಗಾಗಲೇ ಹುಬ್ಬಳ್ಳಿ ವಿದ್ಯಾನಗರದಲ್ಲಿರುವ ಇನ್ ಸ್ಟಿಟ್ಯೂಟ್ ನಲ್ಲಿ 1200 ವಿದ್ಯಾರ್ಥಿಗಳು ತರಬೇತಿಯನ್ನು ಪಡೆಯುತ್ತಿದ್ದಾರೆ.
ಹುಬ್ಬಳ್ಳಿ-ಧಾರವಾಡದ ವಿದ್ಯಾರ್ಥಿಗಳು ಮಾತ್ರವಲ್ಲದೇ ಹಾವೇರಿ, ಗದಗ, ಕಲಬುರಗಿ, ಬೆಳಗಾವಿ,ಬಾಗಲಕೋಟ ಸೇರಿದಂತೆ ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ಹುಬ್ಬಳ್ಳಿಗೆ ಆಗಮಿಸುತ್ತಿದ್ದು, ಆಕಾಶ್ ಇನ್ ಸ್ಟಿಟ್ಯೂಟ್ ಮೂಲಕ ತಾವು ಕಂಡಿರುವ ಕನಸನ್ನು ನನಸು ಮಾಡಿಕೊಂಡಿದ್ದಾರೆ. 25 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ಐಐಟಿ ಹಾಗೂ ಯುನಿವರ್ಸಿಟಿ ಗೋಲ್ಡ್ ಮೆಡೆಲಿಸ್ಟ್ ಗಳು ಬೋಧನೆ ಮಾಡುತ್ತಿದ್ದು, ವಿದ್ಯಾರ್ಥಿಗಳ ಬೌದ್ಧಿಕ ಮಟ್ಟವನ್ನು ಹೆಚ್ಚಿಸುವಲ್ಲಿ ಸಹಾಯಕವಾಗುತ್ತದೆ. ಇನ್ನೂ ಇನ್ ಸ್ಟಿಟ್ಯೂಟ್ ಕುರಿತು ತರಬೇತಿ ಕೇಂದ್ರದ ವ್ಯವಸ್ಥಾಪಕರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಮಕ್ಕಳಲ್ಲಿರುವ ಜ್ಞಾನವನ್ನು ಹೊರಹಾಕುವ ಮೂಲಕ ವಿದ್ಯಾರ್ಥಿಗಳ ಯಶಸ್ಸಿಗೆ ಏನು ಅವಶ್ಯಕತೆ ಇದೆ ಎಂಬುದನ್ನು ಅರ್ಥೈಸಿಕೊಂಡು ವಿದ್ಯಾರ್ಥಿಗಳ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಅಲ್ಲದೇ ಈಗಾಗಲೇ ಸಾಕಷ್ಟು ವಿದ್ಯಾರ್ಥಿಗಳು JEE, NEET, IIT, K-CET ಅಂತಹ ಪರೀಕ್ಷೆಯಲ್ಲಿ ಸಾಧನೆ ಮಾಡಿ ಆಕಾಶ್ ಇನ್ ಸ್ಟಿಟ್ಯೂಟ್ ಕೀರ್ತಿ ಹೆಚ್ಚಿಸಿದ್ದಾರಲ್ಲದೆ ತಮ್ಮ ಪಾಲಕರ ಕನಸನ್ನು ನನಸು ಮಾಡಿದ್ದಾರೆ.
ಒಟ್ಟಿನಲ್ಲಿ ದೇಶಾದ್ಯಂತ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಹೆಸರನ್ನು ಮಾಡಿರುವ ಆಕಾಶ ಇನ್ ಸ್ಟಿಟ್ಯೂಟ್ ವಿದ್ಯಾರ್ಥಿಗಳ ಸಾಧನೆಯೇ ಸಂಸ್ಥೆಯ ಅಭಿವೃದ್ಧಿ ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಹಾಗಿದ್ದರೇ ಮತ್ತೇ ಯಾಕೆ ತಡ ಮಾಡ್ತೀರಾ ನಿಮ್ಮ ಮಕ್ಕಳ ಭವಿಷ್ಯಕ್ಕೆ ಇಂದೆ ಅಡಿಪಾಯ ಹಾಕಿ ಆಕಾಶ್ ಇನ್ ಸ್ಟಿಟ್ಯೂಟ್ ಗೆ ಭೇಟಿ ನೀಡಿ
Kshetra Samachara
30/11/2021 06:37 pm