ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರದಲ್ಲಿ ಅರ್ಥಪೂರ್ಣ ಉಪನ್ಯಾಸ: 200 ಕಾಮರ್ಸ್ ವಿದ್ಯಾರ್ಥಿಗಳು ಭಾಗಿ

ಅಳ್ನಾವರ: ಅಭಿವೃದ್ಧಿಶೀಲ ಸಮಾಜದಲ್ಲಿ ಲೆಕ್ಕ ಪರಿಶೋಧಕ ಹುದ್ದೆ ತನ್ನದೇ ಆದ ಮಹತ್ವ ಪಡೆದಿದೆ.ಈ ಹುದ್ದೆ ಪಡೆಯಲು ಎಸ್ಸೆಸ್ಸೆಲ್ಸಿ ನಂತರದ ಅಧ್ಯಯನವನ್ನು ಕಠಿಣ ಪರಿಶ್ರಮದಿಂದ ಮಾಡಬೇಕು. ನಿರ್ದಿಷ್ಟ ಗುರಿ,ಸಾಧನೆಯ ಛಲ ಇಟ್ಟುಕೊಂಡು ಮುನ್ನುಗ್ಗಿದ್ದಾಗ ಮಾತ್ರ ಯಶಸ್ಸು ಸಾಧ್ಯ ಎಂದು ಲೆಕ್ಕ ಪರಿಶೋಧಕ ವಿನಾಯಕ ಹಿರೇಮಠ ಹೇಳಿದರು.

ಇಲ್ಲಿನ ಸಾಗರೇಕರ ಸ್ಟಡಿ ಸರ್ಕಲ್ ಹಮ್ಮಿಕೊಂಡ ಕಾಮರ್ಸ ಅಧ್ಯಯನದ "ಭವಿಷ್ಯ , ಉದ್ಯೋಗವಕಾಶಗಳು ಹಾಗೂ ತರಬೇತಿ" ವಿಷಯದ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ವಾಣಿಜ್ಯ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶ ಹಾಗೂ ತರಬೇತಿ ವಿಷಯ ಕುರಿತು ಅವರು ಮಾತನಾಡಿ ಆಳವಾದ ಅಧ್ಯಯನ,ಆಸಕ್ತಿಯಿಂದ ಈ ಕ್ಷೇತ್ರಕ್ಕೆ ಬನ್ನಿ ನಿಮ್ಮ ಭವಿಷ್ಯಕ್ಕೆ ಉತ್ತಮ ರಹದಾರಿ ಇದೆ ಎಂದರು.

ಇಂದಿನ ಶೈಕ್ಷಣಿಕ ಪದ್ದತಿ ಎಲ್ಲ ರಂಗದಲ್ಲಿ ವಿಪುಲವಾದ ಉದ್ಯೋಗ ಅವಕಾಶ ನೀಡಿದೆ. ಇದರ ಲಾಭ ಪಡೆಯಲು ಸತತ ಪ್ರಯತ್ನ ಮಾಡಿ ಮುಂದೆ ಬಂದಾಗ ಮಾತ್ರ ನಿಮ್ಮ ಆರ್ಥಿಕ ಸ್ಥಿತಿ ಬದಲಾವಣೆ ಆಗುತ್ತದೆ ಎಂದರು.

"ಕಾಮರ್ಸ್ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶಗಳು" ಎಂಬ ವಿಷಯ ಕುರಿತು ಸಿಎ ವಿಶಾಲ ಪಾಟೀಲ ಮಾತನಾಡಿ, ಉನ್ನತ ಶಿಕ್ಷಣ ಪಡೆಯುವ ಹಂಬಲ ನಿಮ್ಮದಾಗಲಿ. ಬುದ್ದಿ ಮಟ್ಟ ಹೆಚ್ಚಳಕ್ಕೆ ಓದು ಉತ್ತಮ ವೇದಿಕೆ, ಪ್ರತಿ ನಿತ್ಯ ಹೊಸ ವಿಷಯಗಳ ಮನನ ನಿಮ್ಮನ್ನು ಕಾಯುತ್ತಿರುತ್ತವೆ. ಅಧುನಿಕ ತಂತ್ರಜ್ಞಾನ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಿ ಎಂದು ಹೇಳಿದರು.

ಈ ಸಭೆಯಲ್ಲಿ ಗೋಕಾಕ ನಗರ ಸಭೆಯ ಲೆಕ್ಕ ಅಧೀಕ್ಷಕ ಹಾಗೂ ಸ್ಥಳಿಯ ಶಿಕ್ಷಣ ಪ್ರೇಮಿ ಮಹಾದೇವ ಸಾಗರೇಕರ, ಬೆಣಚಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಂದೀಪ ಪಾಟೀಲ, ಅಲಬೈರ್ಟಿನ್ ಮೆಂಡಿಸ್, ರಾಜು ಕರ್ಲೇಕರ, ಮಂಜುನಾಥ ಬೆಂಡಿಗೇರಿ, ವಿಜಯಲಕ್ಷ್ಮಿ ಸಾವಂತ, ಕಲಾವತಿ ಬೈಲೂರ ಮುಂತಾದವರು ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

29/11/2021 10:37 am

Cinque Terre

26.87 K

Cinque Terre

0

ಸಂಬಂಧಿತ ಸುದ್ದಿ