ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ: ದಿವ್ಯಾಂಗ ಮಕ್ಕಳಿಗೆ ಚೆಕ್ ವಿತರಣೆ

ಧಾರವಾಡ: ಸಾರ್ವಜನಿಕ ಶಿಕ್ಷಣ ಇಲಾಖೆಯ ಸಮಗ್ರ ಶಿಕ್ಷಣ ಅಭಿಯಾನ ಹಾಗೂ ಧಾರವಾಡದ ಜನಮುಖಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆಗೈದ ಜಿಲ್ಲೆಯ ದಿವ್ಯಾಂಗ ಮಕ್ಕಳಿಗೆ ಅವರ ಮುಂದಿನ ಶೈಕ್ಷಣಿಕ ವಿದ್ಯಾಭ್ಯಾಸಕ್ಕಾಗಿ ತಲಾ 5 ಸಾವಿರ ರೂಪಾಯಿಗಳ ಚೆಕ್ ವಿತರಿಸಲಾಯಿತು.

ಶಹರ ವಲಯದ ಶಾಲಾ ಸಿದ್ಧತಾ ಕೇಂದ್ರದ ದಿವ್ಯಾಂಗ ವಿದ್ಯಾರ್ಥಿಗಳಾದ ನಾಗನಗೌಡ ಪಾಟೀಲ್, ಮಂಜುಳಾ ನವಲಗುಂದ, ವಿರೇಂದ್ರ ಪತ್ತಾರ, ಭುವನೇಶ್ವರಿ ಮಾನಕರ ಹಾಗೂ ಚಾಣಕ್ಯ ಗೆದಗೇರಿ ಅವರು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮಾಡಿದ ಸಾಧನೆ ಪರಿಗಣಿಸಿ ಜನಮುಖಿ ಸಂಸ್ಥೆಯು ಈ 5 ವಿದ್ಯಾರ್ಥಿಗಳಿಗೆ ತಲಾ 5 ಸಾವಿರ ರೂಪಾಯಿಗಳ ಚೆಕ್ ನೀಡಿ ಪ್ರೋತ್ಸಾಹಿಸಿತು. ಇದೇ ಸಂದರ್ಭದಲ್ಲಿ ಜಿಲ್ಲೆಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪಾಸಾದ ಎಲ್ಲ ದಿವ್ಯಾಂಗ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.

ಕಾರ್ಯಾಗಾರ: ಎಸ್ಸೆಸ್ಸೆಲ್ಸಿ ನಂತರ ಮುಂದೇನು? ಎಂಬ ವಿಷಯದ ಕುರಿತು ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಾಗಾರದಲ್ಲಿ ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿ ಡಿ. ಎನ್. ಮೂಲಿಮನಿ ಮಾತನಾಡಿದರು. ಆರ್.ಎಂ.ಎಸ್.ಎ. ಜಿಲ್ಲಾ ಉಪಯೋಜನಾಧಿಕಾರಿ ಎಸ್. ಎಂ. ಹುಡೇದಮನಿ, ಎಸ್.ಎಸ್.ಎ. ಜಿಲ್ಲಾ ಉಪಯೋಜನಾಧಿಕಾರಿ ಪ್ರಮೋದ ಮಹಾಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಿರೀಶ ಪದಕಿ ಮತ್ತು ಉಮೇಶ ಬೊಮ್ಮಕ್ಕನವರ, ಜನಮುಖಿ ಸಂಸ್ಥೆಯ ಅಧ್ಯಕ್ಷೆ ಬಸಂತಿ ಹಪ್ಪಳದ, ಕಾರ್ಯದರ್ಶಿ ಬಸವರಾಜ ಮ್ಯಾಗೇರಿ, ಬಿ.ಆರ್.ಪಿ. ಅರುಣ ನವಲೂರ, ಬಿ.ಐ.ಇ.ಆರ್.ಟಿ.ಗಳಾದ ಸುಮಿತಾ ಹಿರೇಮಠ, ಗಿರಿಜಾ ಪಾಟೀಲ, ಎಂ.ಪಿ. ದೊಡಮನಿ, ಎಸ್. ಎಸ್. ಜೋಶಿ, ದಿವ್ಯಾಂಗ ಮಕ್ಕಳು ಮತ್ತು ಪಾಲಕರು ಇದ್ದರು

Edited By : PublicNext Desk
Kshetra Samachara

Kshetra Samachara

10/11/2021 10:09 pm

Cinque Terre

5.36 K

Cinque Terre

0

ಸಂಬಂಧಿತ ಸುದ್ದಿ