ಹುಬ್ಬಳ್ಳಿ : ಇಂದಿನಿಂದ 1 ರಿಂದ 5 ನೇ ತರಗತಿಗಳು ಶುರು ಆಗಿವೆ. ಖಾಸಗಿ ಶಾಲೆಗಳಲ್ಲಿ ತಮ್ಮದೇ ರೀತಿಯಲ್ಲಿ ಶಿಕ್ಷಕರು ಮಕ್ಕಳನ್ನ ವೆಲ್ ಕಮ್ ಮಾಡುತ್ತಿದ್ದಾರೆ.ಆದರೆ ಸರ್ಕಾರಿ ಶಾಲೆಯಲ್ಲೂ ಇದೇ ಸಂಭ್ರಮ ಇದಿಯೇ ? ಈ ಪ್ರಶ್ನೆಗೆ ಉತ್ತರ ಸಿಂಪಲ್ ಆಗಿದೆ. ಖಾಸಗಿ ಶಾಲೆಯಷ್ಟು ವೈಭವ ಇಲ್ಲಿ ಕಂಡು ಬರದೇ ಇದ್ದರೂ ಸಹ, ಶಿಕ್ಷಕರು ಮಕ್ಕಳನ್ನ ಸ್ವಾಗತಿಸೋಕೆ ತಕ್ಕಮಟ್ಟಿನ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಗಾಮನಗಟ್ಟಿಯ ಸರ್ಕಾರಿ ಶಾಲೆಯಲ್ಲಿ PublicNext Exclusive ರಿಯಾಲಿಟಿ ಚೆಕ್ ನಡೆಸಿದೆ. ಅದರ ಡಿಟೈಲ್ಸ್ ಇಲ್ಲಿದೆ.
ಗಾಮನಗಟ್ಟಿ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಫ್ರೌಡ ಶಾಲೆ ಇದೆ. 450 ಕ್ಕೂ ಹೆಚ್ಚು ಮಕ್ಕಳು ಇಲ್ಲಿ ಓದುತ್ತಿದ್ದಾರೆ.
ಈ ಶಾಲೆಯಲ್ಲಿಂದು 1 ರಿಂದ 5 ತರಗತಿ ಓದುವ ಮಕ್ಕಳನ್ನ ವೆಲ್ ಕಮ್ ಮಾಡಲಾಗಿದೆ. ಸರ್ಕಾರಿ ಶಾಲೆಯಲ್ಲಿ ಇರೋ ವ್ಯವಸ್ಥೆ ಮತ್ತು ಇಲ್ಲಿ ಮಕ್ಕಳನ್ನ ಸ್ವಾಗತಿಸಿದ ಪರಿ ವಿಶೇಷ ಅನಿಸದೇ ಇದ್ದರೂ ಇದು ತಕ್ಕಮಟ್ಟಿಗೇನೆ ಇತ್ತು.
ಸರ್ಕಾರಿ ಶಾಲೆಯ ದ್ವಾರ ಬಾಗಿಲಿಗೆ ಬಲೂನ್ ಕಟ್ಟಿ ಮಕ್ಕಳಿಗೆ ಗುಲಾಬಿ ಹೂ ಕೊಟ್ಟು ಶಿಕ್ಷಕರು ಸ್ವಾಗತ ಕೋರಿದ್ದಾರೆ. ಸಾನಿಟೈಸರ್, ಮಾಸ್ಕ್, ಹೀಗೆ ಸರ್ಕಾರದ ರೂಲ್ ಪ್ರಕಾರ ಇಲ್ಲೂ ತಕ್ಕಮಟ್ಟಿಗಿನ ವ್ಯವಸ್ಥೆನೂ ಮಾಡಲಾಗಿದೆ. ಶಿಕ್ಷಕರು ಕೂಡ ಮಕ್ಕಳು ಶಾಲೆಗೆ ಬಂದ ಸಂತೋಷದಲ್ಲಿಯೇ ಇದ್ದಾರೆ.
Kshetra Samachara
25/10/2021 03:54 pm