ಗದಗ: ಕೊರೋನಾ ಮಹಾಮಾರಿಯಿಂದ ಶಾಲೆ ಕೂಡ ಬಂದ್ ಆಗಿತ್ತು. ಹೀಗಾಗಿ ಮಕ್ಕಳ ಬಿಸಿ ಊಟವೂ ಬಂದ್ ಆಗಿತ್ತು. 18 ತಿಂಗಳ ನಂತರ ಮತ್ತೆ ಬಿಸಿ ಊಟ ಆರಂಭವಾಗಿದೆ. ಗದಗ ಜಿಲ್ಲೆಯಲ್ಲೂ ಎಲ್ಲಾ ಶಾಲೆಗಳಲ್ಲಿ ಸರ್ಕಾರದ ಮಾರ್ಗ ಸೂಚಿಯಂತೆ ಬಿಸಿ ಊಟ ಆರಂಭವಾಗಿದೆ.
ಆರಂಭದ ಮೊದಲ ದಿನ ಸಿಹಿ ಊಟವಾದ ಕೇಸರಿ ಬಾತ್ ಹಾಗೂ ಅನ್ನ ಸಾಂಬಾರ ಊಟಮಾಡಿದ ಮಕ್ಕಳು ಸಂತಸ ಪಟ್ಟರು. ಕೊರೊನಾ ಮಹಾಮಾರಿ ಮತ್ತೆ ಬಾರದಿರಲೆಂದು ಮಕ್ಕಳು ಸರಸ್ವತಿ ಹಾಗೂ ಅನ್ನಪೂರ್ಣೇಶ್ವರಿ ಶ್ಲೋಕ ಹೇಳುವ ಮೂಲಕ ಭಕ್ತಿಯಿಂದ ಪ್ರಾರ್ಥಿಸಿದರು. ಅನೇಕ ಬಡವ ಮಕ್ಕಳು ಮೊಲದ ದಿನದ ಬಿಸಿ ಊಟ ಸೇವಿಸಿ ಖುಷಿ ವ್ಯಕ್ತಪಡಿಸಿದ್ದಾರೆ.
Kshetra Samachara
21/10/2021 10:25 pm