ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕೆ ಕೆ.ಎಚ್.ಪಾಟೀಲ ಪಿಯು ಕಾಲೇಜಿನ ಅಡಿಪಾಯ:ವಿಜ್ಞಾನದಲ್ಲಿ ವಿದ್ವಾನ್.!

ಹುಬ್ಬಳ್ಳಿ:ವಾಣಿಜ್ಯನಗರಿ ಹುಬ್ಬಳ್ಳಿಯ ಕೆ.ಎಚ್. ಪಾಟೀಲ ಪಿಯು ಸೈನ್ಸ್ ಕಾಲೇಜು ವಿಜ್ಞಾನ ವಿಭಾಗದಲ್ಲಿ ಸಾಕಷ್ಟು ಅಧುನಿಕ ಶಿಕ್ಷಣ ಮಾದರಿಯನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಮಹತ್ವದ ಅಡಿಪಾಯ ಹಾಕಲು ಮುಂದಾಗಿದೆ.

ಉತ್ತರ ಕರ್ನಾಟಕ ಭಾಗದಲ್ಲಿಯೇ ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿಸಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯದ ದಾರಿದೀಪವಾಗಿ ವಾಣಿಜ್ಯನಗರಿ ಹುಬ್ಬಳ್ಳಿಯ ಪ್ರಾರ್ಥನಾ ಎಜುಕೇಶನ್ ಸೊಸೈಟಿ ಸಹಯೋಗದ ವೇಮನ್ ವಿದ್ಯಾವರ್ಧಕ ಸಂಘದ ಕೆ.ಎಚ್.ಪಾಟೀಲ ಪಿಯು ಸೈನ್ಸ್ ಆ್ಯಂಡ್ ಕಾಮರ್ಸ್ ಕಾಲೇಜು ಮುಂಚೂಣಿಯಲ್ಲಿದೆ.

ಸುಮಾರು 13 ವರ್ಷಗಳಿಂದ ಕಾಲೇಜು ಶೈಕ್ಷಣಿಕ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದು, 2017 ರಿಂದ ಪ್ರಾರ್ಥನಾ ಎಜುಕೇಶನ್ ಸೊಸೈಟಿ ಪಿಯುಸಿ ಸೈನ್ಸ್ ನಿರ್ವಹಣೆ ಜವಾಬ್ದಾರಿ ಹೊತ್ತುಕೊಂಡು ಸಾಕಷ್ಟು ಅಭಿವೃದ್ಧಿಯನ್ನು ಮಾಡಿದೆ. ಇನ್ನೂ ನುರಿತ ಬೋಧಕ ಸಿಬ್ಬಂದಿಗಳನ್ನು ಹೊಂದಿರುವ ಈ ಕಾಲೇಜು, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ತರಗತಿಯೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗೆಬೇಕಾದ ಎಲ್ಲ ರೀತಿಯ ತರಬೇತಿಯನ್ನು ನೀಡುವ ಮೂಲಕ ವಿದ್ಯಾರ್ಥಿಗಳ ಕಲಿಕೆಗೆ ಅಗತ್ಯವಿರುವ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸುವಂತ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಾಗಿದೆ. ಇನ್ನೂ ಭವ್ಯವಾದ ಕಟ್ಟಡದಲ್ಲಿ ಸುಸಜ್ಜಿತ ಕೊಠಡಿಗಳು, ಹಾಸ್ಟೆಲ್ ವ್ಯವಸ್ಥೆ, ಪ್ರಯೋಗಾಲಯ, ಭವ್ಯವಾದ ಗ್ರಂಥಾಲಯ ವಿದ್ಯಾರ್ಥಿಗಳ ಮನಸ್ಸಿಗೆ ಮುದ ನೀಡಿ ಮತ್ತಷ್ಟು ಓದುವಂತೆ ಮಾಡುವ ಎಲ್ಲ ಸೌಕರ್ಯಗಳನ್ನು ಕಾಲೇಜು ಹೊಂದಿದೆ.

ವಿದ್ಯಾರ್ಥಿಗಳಲ್ಲಿರುವ ಕಲೆಯನ್ನು ಪ್ರೋತ್ಸಾಹಿಸಿ ಬೆಳೆಸುವ ಮೂಲಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಲು ಮುಂದಾಗಿದೆ. ಅಲ್ಲದೇ ಮುಂಬರುವ ದಿನಗಳಲ್ಲಿ ಕೂಡ ಮತ್ತಷ್ಟು ಉತ್ಕೃಷ್ಟ ಗುಣಮಟ್ಟದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಶೈಕ್ಷಣಿಕ ಸೇವೆ ಸಲ್ಲಿಸಲು ಕಂಕಣಬದ್ಧವಾಗಿದೆ. ವಿಜ್ಞಾನ ವಿಭಾಗದಲ್ಲಿ ಶಿವರಾಜ ಎಂ.ಮಾಗಡಿ (99.83), ಸ್ನೇಹಾ ಕಿತ್ತಳಿ (96.19), ಕವಿತಾ ಸಾಸಳ್ಳಿ(94.83), ವಿಶ್ವ.ಎ.ಬನ್ನಿಕೊಪ್ಪ(94.83), ಮಂಜುನಾಥ ಮನಿನಗರ(93.83), ಗಿರೀಶ ನಡಕಟ್ಟಿನ(93.16), ಸೈಯದ್ ಪಾತೇಶ್ ಪಿ.ನದಾಪ್ (92.50), ಮಹೇಂದ್ರರಡ್ಡಿ.ಎನ್. ಎರಡ್ಡಿ(91.80), ನಂದೀಶ ಬೆಳಗಲಿ(90.66), ಅಂಕಿತಾ ಠಾಕೂರ್(90) ಫಲಿತಾಂಶ ಪಡೆದು ಶಿಕ್ಷಣ ಸಂಸ್ಥೆಗೆ ಕೀರ್ತಿ ತಂದಿದ್ದಾರೆ‌. ಅಲ್ಲದೇ ಕಳೆದ ಐದು ವರ್ಷದ ದಾರಿಯಲ್ಲಿ ಹಲವಾರು ಸಾಧನಗಳನ್ನು ಶಿಕ್ಷಣ ಸಂಸ್ಥೆ ಮಾಡಿರುವುದು ನಿಜಕ್ಕೂ ಕಾಲೇಜಿನ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ.

ಕೆ.ಎಚ್.ಪಾಟೀಲ ಪಿಯು ಸೈನ್ಸ್ ಆ್ಯಂಡ್ ಕಾಮರ್ಸ್ ಕಾಲೇಜು

ರೆಡ್ಡಿ ಹಾಸ್ಟೆಲ್ ಹಿಂದುಗಡೆ ವಿದ್ಯಾನಗರ ಹುಬ್ಬಳ್ಳಿ

ದೂರವಾಣಿ ಸಂಖ್ಯೆ: 7892599062, 9241244431, 9481855789

Edited By : Shivu K
Kshetra Samachara

Kshetra Samachara

19/08/2021 12:51 pm

Cinque Terre

65.76 K

Cinque Terre

3

ಸಂಬಂಧಿತ ಸುದ್ದಿ