ಧಾರವಾಡ: ಧಾರವಾಡದ ಹೊಂಬೆಳಕು ಪ್ರತಿಷ್ಠಾನ ಮತ್ತು ಶ್ರೀಸಾಯಿ ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸಹಯೋಗದಲ್ಲಿ ಆರಂಭಿಸಿರುವ ವಿದ್ಯಾ ವಿಕಾಸ ಕೇಂದ್ರದಲ್ಲಿ, ಪ್ರತಿವಾರವೂ ವಿನೂತನ ಯೋಜನೆಗಳ ಮೂಲಕ ವಿದ್ಯಾರ್ಥಿಗಳ ಶ್ರೇಯಸ್ಸಿಗಾಗಿ, ಮಕ್ಕಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಪೂರಕವಾದ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ.
ಕಳೆದ ವಾರ ಮಕ್ಕಳಿಗೆ ಪ್ರಾರ್ಥನೆ, ಶ್ಲೋಕ, ಗಾದೆ ಮಾತುಗಳ ವಿವರಣೆ, ವಚನ, ಸಂಗೀತ ಮತ್ತು ಅಕ್ಷರಾಭ್ಯಾಸವನ್ನು ಮಾಡಲಾಯಿತು. ಇವೆಲ್ಲದರ ಜೊತೆಗೆ, ನಲಿ-ಕಲಿ ಎನ್ನುವಂತೆ ಮಕ್ಕಳ ದೈಹಿಕ ಮತ್ತು ಮಾನಸಿಕ ದೃಢತೆಗೆ ಸಂಬಂಧಿಸಿದಂತಹ ಆಟ-ಪಾಠಗಳನ್ನು ಮತ್ತು ನೆನಪಿನ ಶಕ್ತಿ, ಏಕಾಗೃತೆಯನ್ನು ಹೆಚ್ಚಿಸುವ ಚಟುವಟಿಕೆಗಳನ್ನು ಮಕ್ಕಳಿಂದ ಮಾಡಿಸಲಾಯಿತು.
Kshetra Samachara
13/08/2021 01:21 pm