ಕುಂದಗೋಳ : ಅಲ್ಲೇಲ್ಲಾ ಆಡಬೇಕು ಆಡಿ ಜಯಿಸಬೇಕೆಂಬ ವಿದ್ಯಾರ್ಥಿಗಳ ಧ್ಯೇಯ, ಗೆಲುವಿನ ಗುರಿಯನ್ನು ಬೆನ್ನಟ್ಟಿದ ಮಕ್ಕಳಿಗೆ ಸಿಳ್ಳೆ ಚಪ್ಪಾಳೆ ಹೊಡೆದು ಪ್ರೋತ್ಸಾಹಿಸುವ ಸ್ನೇಹಿತರು, ಕಿರುನಗೆಯ ಸನ್ನೆಯಲ್ಲೇ ನಿನ್ನಿಂದ ಸಾಧ್ಯ ಆಡು ಎನ್ನುವ ಶಿಕ್ಷಕ ಬಳಗ.
ಇವೆಲ್ಲಾ ನೋಟಗಳು ಕಂಡು ಬಂದಿದ್ದು ಕುಂದಗೋಳ ಪಟ್ಟಣದ ಹರಭಟ್ಟ ಕಾಲೇಜಿನ ಆವರಣದಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ.
ಶಾಸಕಿ ಕುಸುಮಾವತಿ ಶಿವಳ್ಳಿ ಕ್ರೀಡಾ ಧ್ವಜಾರೋಹಣ ಹಾಗೂ ಕ್ರೀಡಾ ಜ್ಯೋತಿ ಬೆಳಗಿಸುವ ಮೂಲಕ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಯಶಸ್ವಿ ಚಾಲನೆ ನೀಡಿ ನಿರ್ಗಮಿಸಿದರು.
ಬಳಿಕ ಆರಂಭಗೊಂಡ ಕ್ರೀಡಾಕೂಟದಲ್ಲಿ ಕುಂದಗೋಳ ತಾಲೂಕಿನ 12 ಕ್ಕೂ ಹೆಚ್ಚು ಕಾಲೇಜುಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿ ಖೋಖೋ, ಕಬಡ್ಡಿ, ವ್ಹಾಲಿಬಾಲ್, ಸೆಟಲ್ ಬ್ಯಾಡ್ಮಿಂಟನ್, ಬಾಲ್ ಬ್ಯಾಡ್ಮಿಂಟನ್, ತ್ರೋ ಬಾಲ್ ಪಂದ್ಯಗಳನ್ನಾಡಿ ಕೊರೊನಾ ಸಮಯದಲ್ಲಿ ಶಾಲಾ ಕಾಲೇಜು ಬಾಗಿಲು ಹಾಕಿದ ಕಹಿ ನೆನಪುಗಳನ್ನು ಮರೆತು ಆಟಗಳನ್ನು ಸಂಭ್ರಮಿಸಿದರು.
ಸುರಿಯುವ ಮಳೆಯಲ್ಲೂ ಕ್ರೀಡೆಗೆ ಒತ್ತು ಕೊಟ್ಟ ವಿದ್ಯಾರ್ಥಿಗಳ ಕಬಡ್ಡಿ ಹಾಗೂ ವ್ಹಾಲಿಬಾಲ್ ಆಟಗಳು ನೋಡುಗರಲ್ಲಿ ರೋಮಾಂಚನ ಸೃಷ್ಟಿಸಿದವು.
ಸಂಪೂರ್ಣ ಹರಭಟ್ಟ ಕಾಲೇಜು ಆಡಳಿತ ಮಂಡಳಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತೆಜಿಸಿ ಆಟಗಳಿಗೆ ಹೊಸ ಹುಮ್ಮಸ್ಸನ್ನು ತುಂಬಿದರು.
Kshetra Samachara
22/02/2021 07:52 pm