ಕಲಘಟಗಿ: ತಾಲೂಕಿನ ಬೆಲವಂತರ ಗ್ರಾಮದಲ್ಲಿ ಕಲಘಟಗಿ-ಮುಂಡಗೋಡ ರಾಜ್ಯ ರಸ್ತೆಯ ಸಂಚಾರ ತಡೆದ ವಿದ್ಯಾರ್ಥಿಗಳು ಗ್ರಾಮಕ್ಕೆ ಬಸ್ ಗಳನ್ನು ನಿಲುಗಡೆ ಮಾಡಲು ಒತ್ತಾಯಿಸಿದರು.
ಬೆಲವಂತರ ಗ್ರಾಮಕ್ಕೆ ಬಸ್ ವ್ಯವಸ್ಥೆ ಇಲ್ಲ ಹಾಗೂ ಇಲ್ಲಿ ಬಸ್ ನಿಲುಗಡೆ ಮಾಡುತ್ತಿಲ್ಲ.ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಕಾರಣ ಬೆಲವಂತರ ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸ ಬೇಕು ಹಾಗೂ ಬೆಲವಂತರ ಗ್ರಾಮಕ್ಕೆ ಬಸ್ ನಿಲುಗಡೆಯಾಗ ಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.
ಪ್ರತಿಭಟನೆಯಿಂದ ಕೆಲ ಹೊತ್ತು ಕಲಘಟಗಿ-ಮುಂಡಗೋಡ ರಸ್ತೆಯಲ್ಲಿ ಸಂಚಾರ ದಟ್ಟಣೆಯಾಗಿ ಪ್ರಯಾಣಿಕರು ತೊಂದರೆ ಅನುಭವಿಸಿದರು.
Kshetra Samachara
19/02/2021 07:57 pm