ಕುಂದಗೋಳ : ತಾಲೂಕಿನ ಗುಡೇನಕಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಜಿಲ್ಲಾ ಪಂಚಾಯತ ಅಕ್ಷರ ದಾಸೋಹ ಅಧಿಕಾರಿ ಬಸವರಾಜ ಮಯಾಚಾರ್ಯ ಹಾಗೂ ತಾಲೂಕು ಪಂಚಾಯತ ಅಕ್ಷರ ದಾಸೋಹ ಅಧಿಕಾರಿ ಎಂ.ಬಿ ಬಡಿಗೇರ ಅವರು ಆಹಾರ ಧಾನ್ಯ ವಿತರಣೆ ಮಾಡಿದರು.
ಬಳಿಕ ಶಾಲೆಯ ಅಭಿವೃಧ್ಧಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅವರು ಹಾಗೂ ಶಾಲಾ ಅಭಿವೃದ್ಧಿಗೆ ಶ್ರಮಿಸಿದ ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರು ಎಸ್ಡಿಎಂಸಿ ಅಧ್ಯಕ್ಷರನ್ನು ಮತ್ತು ಸರ್ವ ಸದಸ್ಯರನ್ನು ಹಾಗೂ ಶಾಲಾ ಅಭಿವೃದ್ಧಿಗೆ ದಾನ ನೀಡಿದ ಗ್ರಾಮದ ದಾನಿಗಳನ್ನು ಶ್ಲಾಘಿಸಿದರು.
ಹಾಗೂ ಶಾಲಾ ಅಭಿವೃದ್ಧಿಗಾಗಿ ಸಾರ್ವಜನಿಕರು ಮತ್ತಷ್ಟು ಸಹಕರಿಸಿ ಈ ಶಾಲೆಯನ್ನು ತಾಲೂಕಿಗೆ ಮಾದರಿ ಮಾಡಿ ಎಂದರು. ಈ ವೇಳೆ ಶಾಲಾ ಶಿಕ್ಷಕ ಸಿಬ್ಬಂದಿಗಳು ಗ್ರಾಮಸ್ಥರು ಪಂಚಾಯತ ಅಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
09/02/2021 12:30 pm