ನವಲಗುಂದ: ಸೋಮವಾರ 2021-22ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಹಿನ್ನೆಲೆ ನವಲಗುಂದದ ಶಂಕರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಬಜೆಟ್ ಮಂಡನೆಯ ವೀಕ್ಷಣೆಗೆ ಕಾಲೇಜಿನ ಸಿಬ್ಬಂದಿ ಅನುವು ಮಾಡಿಕೊಟ್ಟಿದ್ದರು.
ಬಜೆಟ್ ಮಂಡನೆಯ ಮಾಹಿತಿ ವಿದ್ಯಾರ್ಥಿಗಳಿಗೆ ಅತ್ಯವಶ್ಯ ಎಂಬ ಸದುದ್ದೇಶದಿಂದ ಬಜೆಟ್ ಮಂಡನೆಯ ವೀಕ್ಷಣೆಗೆ ಅವಕಾಶ ನೀಡಲಾಗಿತ್ತು.ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಕಸ್ತೂರಿ ಪಿ ಬಿಕ್ಕಣ್ಣವರ ಮತ್ತು ಸಿಬ್ಬಂದಿ ಭಾಗಿಯಾಗಿ ಮಂಡನೆಯನ್ನು ವೀಕ್ಷಿಸಿದರು.
Kshetra Samachara
01/02/2021 02:00 pm