ಕುಂದಗೋಳ : ತಾಲೂಕಿನ ಗುಡಗೇರಿ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಇತಿಹಾಸ ಸಹಾಯಕ ಪ್ರಾಧ್ಯಾಪಕಿ ಲತಾ.ಎನ್. ಕಿಲ್ಲೇದಾರ ಅವರಿಗೆ 2019-20ನೇ ಸಾಲಿನ ಕರ್ನಾಟಕ ವಿಶ್ವವಿದ್ಯಾಲಯ ಮಟ್ಟದ ಡಾ. ಡಿ.ಸಿ.ಪಾವಟೆ ಉತ್ತಮ ಎನ್,ಎಸ್,ಎಸ್ ಕಾರ್ಯಕ್ರಮಾಧಿಕಾರಿ ಪ್ರಶಸ್ತಿ ದೊರಕಿದೆ.
ಕಳೆದ 3 ವರ್ಷಗಳಿಂದ ಮಹಾ ವಿದ್ಯಾಲಯದ ಎನ್,ಎಸ್,ಎಸ್ ಕಾರ್ಯಕ್ರಮದ ಅಧಿಕಾರಿಯಾಗಿ ನೀಡಿದ ಉತ್ತಮ ಸೇವೆ ಗುರುತಿಸಿ ಕವಿವಿ ರಾಷ್ಟ್ರೀಯ ಸೇವಾ ಯೋಜನಾ ಕೋಶದಿಂದ ಈ ಪ್ರಶಸ್ತಿ ನೀಡಿ ಗೌರವಿಸಿದೆ.
Kshetra Samachara
19/01/2021 10:53 am