ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಶಾಲಾಭಿವೃದ್ದಿಗೆ ಸಮುದಾಯದ ಸಹಕಾರ ಅಗತ್ಯ

ಕಲಘಟಗಿ:ಶಾಲೆ ಅಭಿವೃದ್ಧಿ ಪಥದತ್ತ ಸಾಗಲು ಶಾಲೆಯ ಸರ್ವ ಸಿಬ್ಬಂದಿಯೂ ನಿಷ್ಠೆ ಯಿಂದ ಕೆಲಸ ಮಾಡುವುದರ ಜೊತೆಗೆ ಸಮುದಾಯದ ಸಹಕಾರ ಅಗತ್ಯ ಎಂದು ಕುಮಾರ್ ಕೆ.ಎಫ್ ತಿಳಿಸಿದರು.

ಅವರು ದೇವಿಕೊಪ್ಪದ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆದ ಉಚಿತ ಸ್ಯಾನಿಟೈಜರ್ ಹಾಗೂ ಮಾಸ್ಕ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಿಕ್ಷಕಿ ನಿರ್ಮಲಾ ಶೆಟ್ಟರ್ ಮಾತನಾಡಿ,ಮಕ್ಕಳು ಸಾಮಾಜಿಕ ಅಂತರ ಕಾಪಾಡಿಕೊಂಡು ಭಯರಹಿತವಾಗಿ ಕಲಿಕಾ ಕಾರ್ಯದಲ್ಲಿ ತೊಡಗಲಿ ಎಂಬ ಆಶಯದೊಂದಿಗೆ ಗ್ರಾಮದ ಶಿಕ್ಷಣ ಆಸಕ್ತರಾದ ದಿನೇಶ ಮಿರ್ಜಿಯವರು ಶಾಲಾ ಮಕ್ಕಳಿಗೆ ಉಚಿತವಾಗಿ ಮಾಸ್ಕ ,ಸ್ಯಾನಿಟೈಜರ್ ವಿತರಿಸಿದ್ದು ಮೆಚ್ಚುಗೆಗೆ ಪಾತ್ರವಾದ ಕೆಲಸ ಎಂದು ತಿಳಿಸಿದರು.

ದಿನೇಶ ಮಿರ್ಜಿ, ಫಕ್ಕಿರೇಶ ಕೇರಿಮಠ, ನಿರ್ಮಲಾ ಶೆಟ್ಟರ್, ಮಲ್ಲಿಕಾರ್ಜುನ ದೊಡಮನಿ ಇದ್ದರು.ರಂಗನಾಥ ವಾಲ್ಮೀಕಿ ಸ್ವಾಗತಿಸಿ ನಿರೂಪಿಸಿದರು.

Edited By : Nagaraj Tulugeri
Kshetra Samachara

Kshetra Samachara

16/01/2021 03:33 pm

Cinque Terre

12.58 K

Cinque Terre

0

ಸಂಬಂಧಿತ ಸುದ್ದಿ