ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಾ.ಕ.ರಾ.ರ.ಸಾ.ಸಂಸ್ಥೆಯಿಂದ ವಿದ್ಯಾರ್ಥಿ ಬಸ್ ಪಾಸ್ ವಿತರಣೆ

ಹುಬ್ಬಳ್ಳಿ:2020-21ನೇ ಶೈಕ್ಷಣಿಕ ವರ್ಷದ ಅವಧಿಗೆ ಶಾಲಾ ಕಾಲೇಜುಗಳು ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ವಾಕರಸಾ ಸಂಸ್ಥೆ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ವ್ಯಾಪ್ತಿಯ ಪ್ರಮುಖ ಬಸ್ ನಿಲ್ದಾಣಗಳಲ್ಲಿ ವಿದ್ಯಾರ್ಥಿ ರಿಯಾಯಿತಿ ಬಸ್ ಪಾಸ್ ಗಳನ್ನು ವಿತರಣೆ ಮಾಡಲಾಗುತ್ತಿದೆ.

ನವಲಗುಂದ, ಕಲಘಟಗಿ, ಕುಂದಗೋಳ, ಅಣ್ಣಿಗೇರಿ ಮತ್ತು ತಡಸ ಬಸ್ ನಿಲ್ದಾಣಗಳಲ್ಲಿ ವಿದ್ಯಾರ್ಥಿ ಪಾಸು ವಿತರಣಾ ಕೇಂದ್ರಗಳನ್ನು ತೆರೆಯಲಾಗಿದೆ.

ವಿದ್ಯಾರ್ಥಿಗಳು ಪಾಸುಗಳನ್ನು ಪಡೆಯಲು ತಮ್ಮ ಹತ್ತಿರದ "ಹುಬ್ಬಳ್ಳಿ-ಧಾರವಾಡ ಒನ್" ಕೇಂದ್ರದಲ್ಲಿ ಅಥವ ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯ ಸೇವಾ ಕೇಂದ್ರದಲ್ಲಿ (ಸಿ. ಎಸ್. ಸಿ. ಸೆಂಟರ್ ) ಅಗತ್ಯ ದಾಖಲಾತಿಗಳೊಂದಿಗೆ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು. ನಂತರ ಸದರಿ ದಾಖಲಾತಿಗಳ ಪ್ರತಿಗಳೊಂದಿಗೆ ನಿಗಧಿತ ಮೊತ್ತವನ್ನು ತಮ್ಮ ಶಾಲೆ- ಕಾಲೇಜಿನಲ್ಲಿ ಸಲ್ಲಿಸಬೇಕು.

ಶಿಕ್ಷಣ ಸಂಸ್ಥೆಗಳ ಅಧಿಕಾರಿಗಳು ಅಗತ್ಯ ದಾಖಲಾತಿಗಳು ಹಾಗೂ ಮೊತ್ತದೊಂದಿಗೆ ಎಲ್ಲ ವಿದ್ಯಾರ್ಥಿಗಳ ಅರ್ಜಿಗಳನ್ನು

ತಮ್ಮ ವ್ಯಾಪ್ತಿಯ ಸಂಸ್ಥೆಯ ಪಾಸು ವಿತರಣಾ ಕೇಂದ್ರದಲ್ಲಿ ನೀಡಿ, ಪಾಸುಗಳನ್ನು ಪಡೆದುಕೊಂಡು ವಿದ್ಯಾರ್ಥಿಗಳಿಗೆ ವಿತರಿಸುವರು ಎಂದು ವಾಕರಸಾ ಸಂಸ್ಥೆ, ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.

ಅಗತ್ಯವಿರುವ ದಾಖಲಾತಿಗಳು: 2020-21 ನೇ ಸಾಲಿನಲ್ಲಿ ಶಾಲಾ ಕಾಲೇಜಿಗೆ ಪ್ರವೇಶ ಪಡೆದಿರುವ ಬಗ್ಗೆ ಶುಲ್ಕ ಪಾವತಿ ರಸೀದಿ, ವಾಸ ಸ್ಥಳ ವಿಳಾಸ ದೃಢೀಕರಣ, ಆಧಾರ್ ಕಾರ್ಡ್ ಹಾಗೂ ಇತ್ತೀಚಿನ ಸ್ಟಾಂಪ್ ಅಳತೆಯ ಮೂರು ಭಾವಚಿತ್ರಗಳು.

ನಿಗದಿತ ಪಾಸ್ ಶುಲ್ಕದೊಂದಿಗೆ ಸಂಸ್ಕರಣ ಶುಲ್ಕ ರೂ.100 ಹಾಗೂ ಅಪಘಾತ ಪರಿಹಾರ ನಿಧಿ ರೂ.50.

ವಿವಿಧ ತರಗತಿಗಳ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ನಿಗದಿಪಡಿಸಿದ ಪಾಸ್ ದರಗಳ ವಿವರಗಳು:

ಶಾಲೆ: ಪಾಸ್ ಒಟ್ಟು ಕಾಲೇಜು ದರ ಮೊತ್ತ

ಪ್ರಾಥಮಿಕ :ಉಚಿತ/ ರೂ.150

ಪ್ರೌಢಶಾಲೆ ವಿದ್ಯಾರ್ಥಿ ಗಳು 600/750

ಪ್ರೌಢಶಾಲೆ ವಿದ್ಯಾರ್ಥಿನಿಯರು 400/550

ಕಾಲೇಜು/ ಡಿಪ್ಲೋಮಾ 900/1050

ಐಟಿಐ 1150/1300

ವೃತ್ತಿಪರ ಕೋರ್ಸುಗಳು 1400/1550

ಸಂಜೆ ಕಾಲೇಜು/ ಪಿ ಎಚ್ ಡಿ 1200/1350

Edited By : Nirmala Aralikatti
Kshetra Samachara

Kshetra Samachara

09/01/2021 10:20 am

Cinque Terre

25.2 K

Cinque Terre

4

ಸಂಬಂಧಿತ ಸುದ್ದಿ