ಹುಬ್ಬಳ್ಳಿ- ಕೊರೊನಾ ಹಾವಳಿ ಹಿನ್ನಲೆಯಲ್ಲಿ, ಎಲ್ಲಾ ಶಿಕ್ಷಣ ಕ್ಷೇತ್ರವನ್ನು ಬಂದ್ ಮಾಡಲಾಗಿತ್ತು. ಇದರಿಂದಾಗಿ ಮತ್ತೆ ಸರಕಾರದ ಆದೇಶದ ಮೇರೆಗೆ, ಇಂದು ಶಾಲಾ ಕಾಲೇಜು ಆರಂಭವಾಗುತ್ತಿದ್ದಂತೆ ಜಿಲ್ಲೆಯ ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಬ್ಯಾಹಟ್ಟಿ ಕ್ಲಸ್ಟರ್ ವ್ಯಾಪ್ತಿಯ ಹೆಬಸೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯಲ್ಲಿ ವಿದ್ಯಾಗಮ ಪ್ರಾರಂಭೋತ್ಸವದಲ್ಲಿ ವಿಜೃಂಭಣೆಯಿಂದ ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕರನ್ನು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳ ಅನುಸಾರ ಹೂ ಗುಚ್ಛ ನೀಡಿ ಚಾಕಲೇಟ್ ಕೊಟ್ಟು ಶಾಲೆಗೆ ಭವ್ಯವಾಗಿ ಬರಮಾಡಿಕೊಂಡರು.
ಇದೇ ಸಂದರ್ಭದಲ್ಲಿ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಸ್ಯಾನಿಟೈಜ್ ಥರ್ಮಲ್ ಸ್ಕ್ಯಾನಿಂಗ್ ಮಾಡಿದರು.ಇದೇ ಸಂದರ್ಭದಲ್ಲಿ ಶಾಲೆಯ ಆಡಳಿತ ಮಂಡಳಿಯ ಎಸ್.ಡಿ.ಎಮ್.ಸಿ.ಪದಾಧಿಕಾರಿಗಳಾದ ಲಾಡಸಾಬ ಶೇಖಸನದಿ ಬಿ.ಎಫ್.ಭೂಮಣ್ಣವರ ಕಾವೇರಿ ಅಕ್ಕಿ ಆರ್.ವಾಯ್.ಬಾರ್ಕೇರ.ಮು.ಶಿ.ಎಸ್.ಎಲ್.ಬೆಟಗೇರಿ.ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಅಶೋಕ.ಸಜ್ಜನ.ಸಿ.ಆರ್.ಪಿ ದುರಗೇಶ ಮಾದರ.ದೇವೇಂದ್ರ ಪತ್ತಾರ.ಲತಾ ಗ್ರಾಮಪುರೋಹಿಎಮ್.ಎನ್.ಮಾಡಳ್ಳಿ ಎಸ್.ಜಿ.ಕಂಬಳಿ ಎಸ್.ಎಸ್.ಮಡಿವಾಳರ ಡಿ.ಎಸ್.ಕೊರಗರ.ಸುಧಾ.ಕೊಣ್ಣೂರ ಉಪಸ್ಥಿತರಿದ್ದರು.
Kshetra Samachara
01/01/2021 03:55 pm