ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಬಾಗಿಲು ಮುಚ್ಚಿದ ಶಾಲೆ ಗೋಡೆಗಳಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ್ರು ಈ ಶಿಕ್ಷಕರು

ಕುಂದಗೋಳ : ಕೊರೊನಾ ವೈರಸ್ ಲಾಕ್ ಡೌನ್ ಪರಿಣಾಮ ಶಾಲೆಗಳು ಬಾಗಿಲು ಮುಚ್ಚಿದ ವಿಚಾರ ನಿಮ್ಗೆ ಗೊತ್ತಿರುವ ವಿಚಾರ, ಆದ್ರೆ ಈ ಶಾಲೆ ಬಾಗಿಲು ಮುಚ್ಚಿದ ಅವಧಿಯನ್ನೇ ಸದ್ಬಳಕೆ ಮಾಡಿಕೊಂಡು ಶಿಕ್ಷಕರು ಶಾಲೆಯನ್ನ ಮದುವಣಗಿತ್ತಿಯಂತೆ ಶೃಂಗಾರ ಮಾಡಿ ಶಾಲೆ ಗೋಡೆಗಳಲ್ಲಿ ಶಿಕ್ಷಣಿಕ ಬೀಜ ಬಿತ್ತಿ ಫಲಕ್ಕಾಗಿ ಕಾಯುತ್ತಿದ್ದಾರೆ.

ಇದೇನಪ್ಪಾ ಶಾಲೆ ಗೋಡೆಗಳ ಮೇಲೆ ಬೀಜ ಬಿತ್ತೊದು ಅಂದ್ರಾ ಹೌದು ! ಸ್ವಾಮಿ ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಈ ಇಂತಹದೊಂದು ಕೆಲಸ ಮಾಡಿ ಸರ್ಕಾರಿ ಶಾಲೆಯನ್ನ ಮಾದರಿ ಶಾಲೆಯಾಗಿ ಮಾಡಿದ್ದಾರೆ ಸ್ವತಃ ಶಿಕ್ಷಕರು ಸೇರಿದಂತೆ ಗುಡೇನಕಟ್ಟಿ ಗ್ರಾಮಸ್ಥರಿಂದ ಕೈಲಾದ ಸಹಾಯ ಪಡೆದು ಶಾಲೆಯ ಗೋಡೆಗಳಲ್ಲಿ ವಿಜ್ಞಾನ, ಗಣಿತ, ಕನ್ನಡ, ಆಂಗ್ಲ, ಹಿಂದಿ ಶಿಕ್ಷಣದ ಮಾಹಿತಿ ಸಮಾಜ, ವಿಜ್ಞಾನ ಎಲ್ಲ ಫಲಕಗಳು ಸೇರಿದಂತೆ ಪ್ರಾಣಿ, ಪಕ್ಷಿಗಳ ಚಿತ್ರ ಬಿಡಿಸಿದ್ದಾರೆ.

ಅಷ್ಟೇ ಅಲ್ಲದೆ ಶಾಲೆಯ ಆವರಣವನ್ನು ಸ್ವಚ್ಚಗೊಳಿಸಿ ಶಾಲೆಯ ಗೋಡೆ ಕಂಬಗಳಿಗೆ ಹೊಸದಾಗಿ ಬಣ್ಣ ಬಳಿದಿದ್ದು ಶಾಲೆ ಆರಂಭವಾಗಿದ್ದರೆ ಸಾಕು ಮಕ್ಕಳು ಗೋಡೆ ಮೇಲೆ ಬಿಡಿಸಿದ ಚಿತ್ರಗಳಿಂದ ಅಕ್ಷರ ಕಲಿತರೇ ಸಾಕು ಜೀವನ ಸಾರ್ಥಕ ಎನ್ನುತ್ತಾರೆ ಶಾಲೆಯ ಮುಖ್ಯ ಶಿಕ್ಷಕ.

ಶಾಲೆಯ ರಜಾ ದಿನಗಳಲ್ಲೂ ಶಿಕ್ಷಕರ ಬೆಳಿಗ್ಗೆಯಿಂದ ಸಂಜೆಯವರೆಗೆ ಶಾಲೆ ಬಿಟ್ಟು ಕದಲದಿರುವ ಶಿಕ್ಷಕರ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚಿಗೆ ಸೂಚಿಸಿದ್ದಾರೆ ಇತ್ತ ಶಿಕ್ಷಕರು ದಾನಿಗಳಿದ್ದರೆ ಶಾಲೆಗೆ ಸಹಾಯ ಮಾಡಿ ಎನ್ನುತ್ತಿದ್ದಾರೆ.

Edited By :
Kshetra Samachara

Kshetra Samachara

23/09/2020 07:09 pm

Cinque Terre

19.17 K

Cinque Terre

1

ಸಂಬಂಧಿತ ಸುದ್ದಿ