ಹುಬ್ಬಳ್ಳಿ: ಕೊರೋನಾ ವೈರಸ್ ಆತಂಕ ದೂರವಾಗುತ್ತಿದ್ದಂತೆಯೇ ರಾಜ್ಯ ಸರ್ಕಾರ,ಶಿಕ್ಷಣ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿ ನಿರ್ಧಾರ ಕೈಗೊಂಡಿದ್ದು,ಈ ನಿರ್ಧಾರಕ್ಕೆ ಹುಬ್ಬಳ್ಳಿಯ ಪಿಯು ಕಾಲೇಜ ಒಂದು ಸ್ವಾಗತಿಸಿದೆ.ಅಲ್ಲದೇ ಸರ್ಕಾರದ ನಿರ್ದೇಶನಕ್ಕೆ ತಮ್ಮ ಮನವಿಯೊಂದನ್ನು ಸಲ್ಲಿಸಿದ್ದು,ಪಬ್ಲಿಕ್ ನೆಕ್ಸ್ಟ್ ಮೂಲಕ ಸರ್ಕಾರಕ್ಕೆ ಸಲಹೆ ನೀಡಿದೆ.ಅಷ್ಟಕ್ಕೂ ಏನಿದು ಅಂತೀರಾ ಈ ಸ್ಟೋರಿ ನೋಡಿ...
ವಾಣಿಜ್ಯನಗರಿ ಹುಬ್ಬಳ್ಳಿಯ ಶಿರೂರ ಪಾರ್ಕ್ ನಲ್ಲಿರುವ ಇಂಪಲ್ಸ್ ಪಿಯು ಸೈನ್ಸ್ ಮಹಾವಿದ್ಯಾಲಯವು ಜನವರಿ 01ರಿಂದ ದ್ವೀತಿಯ ಪಿಯು ಪ್ರಾರಂಭಕ್ಕೆ ಸರ್ಕಾರ ಸೂಚನೆ ನೀಡಿರುವುದನ್ನು ಸ್ವಾಗತಿಸಿದೆ.ಅಲ್ಲದೇ ಸರ್ಕಾರದ ನಿರ್ದೇಶನವನ್ನು ಪಾಲಿಸುವ ಮೂಲಕ ಶೈಕ್ಷಣಿಕ ವರ್ಷದ ಪ್ರಾರಂಭಕ್ಕೆ ಸಿದ್ದಗೊಂಡಿದೆ.ಇನ್ನೂ ವಿದ್ಯಾರ್ಥಿಗಳು ಕೂಡ ಭಯವನ್ನು ಬಿಟ್ಟು ಕಾಲೇಜಿಗೆ ಆಗಮಿಸುವುದಾಗಿ ಕೂಡ ಹೇಳಿಕೊಂಡಿದ್ದಾರೆ.ಹಾಗಿದ್ದರೇ ವಿದ್ಯಾರ್ಥಿಗಳ ಮಾತನ್ನೊಮ್ಮೆ ಕೇಳಿ ಬಿಡಿ...
ಇನ್ನೂ ರಾಜ್ಯ ಸರ್ಕಾರ ಎಸ್.ಎಸ್.ಎಲ್.ಸಿ. ಹಾಗೂ ದ್ವೀತಿಯ ಪಿಯುಸಿ ಪ್ರಾರಂಭಕ್ಕೆ ಚಿಂತನೆ ನಡೆಸಿದ್ದು,ಆದ್ರೇ ಸರ್ಕಾರ ಪರೀಕ್ಷೆ ಕುರಿತು ಹಾಗೂ ಕಾಲಮಿತಿಯ ಕುರಿತು ಯಾವುದೇ ಮಾಹಿತಿಯನ್ನು ನೀಡಿಲ್ಲ.ಕೂಡಲೇ ಸರ್ಕಾರ ಪರೀಕ್ಷೆ ದಿನಾಂಕ ನಿಗದಿಪಡಿಸಿ ಹಾಗೂ ಎಷ್ಟು ದಿನಗಳಲ್ಲಿ ಪಠ್ಯಕ್ರಮವನ್ನು ಪೂರ್ಣಗೊಳಿಸಬೇಕು ಎಂಬುವ ಬಗ್ಗೆ ಮಾಹಿತಿ ನೀಡಬೇಕು ಎಂಬುವಂತ ಮಾತನ್ನು ಪಬ್ಲಿಕ್ ನೆಕ್ಸ್ಟ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
ರಾಜ್ಯದಲ್ಲಿ ಕೊರೋನಾ ಭಯ ಕಳೆದು ಶಾಲಾ ಕಾಲೇಜು ಪ್ರಾರಂಭಗೊಂಡು ಮಕ್ಕಳು ಉತ್ತಮ ರೀತಿಯಲ್ಲಿ ಶೈಕ್ಷಣಿಕ ವರ್ಷಕ್ಕೆ ಪಾದಾರ್ಪಣೆ ಮಾಡಲಿ ಹಾಗೂ ಪಾಲಿಕರು ಕೂಡ ಯಾವುದೇ ಭಯವನ್ನು ಇಟ್ಟುಕೊಳ್ಳದೇ ಮಕ್ಕಳಿಗೆ ಶಿಕ್ಷಣಕ್ಕೆ ಅವಕಾಶ ಕಲ್ಪಿಸಬೇಕು ಎಂದು ಇಂಪಲ್ಸ್ ಕಾಲೇಜಿನ ನಿರ್ದೇಶಕರು ಹಾಗೂ ಪ್ರಾಂಶುಪಾಲರು ಪಾಲಿಕರಿಗೆ ಮನವಿ ಮಾಡಿದ್ದಾರೆ.
Kshetra Samachara
21/12/2020 10:46 pm