ಕಲಘಟಗಿ:ಗುಡ್ ನ್ಯೂಜ್ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯ,ಚುನಾವಣಾ ಸಾಕ್ಷರತಾ ಕ್ಲಬ್ ಹಾಗೂ ಎನ್.ಎಸ್.ಎಸ್ ಘಟಕದಿಂದ ತಾಲೂಕಾ ಮಟ್ಟದ ಪ್ರಬಂಧ ಹಾಗೂ ರಸಪ್ರಶ್ನೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರಬಂಧ ಸ್ಪರ್ಧೆ (ಕನ್ನಡ)ಯಲ್ಲಿ ಪ್ರಥಮ ಸ್ಥಾನ ರವಿ ಕೊಪ್ಪದ,ಗುಡ್ ನ್ಯೂಜ್ ಪ.ಪೂ.ಕಾಲೇಜ್, ಕಲಘಟಗಿ,ದ್ವಿತೀಯ ಸ್ಥಾನ ವೀರಭದ್ರಯ್ಯ ಶಂಕಿನಮಠ,ಎಸ್.ಎಸ್ ಪ.ಪೂ.ಕಾಲೇಜ್ ಗಳಗಿ ಹುಲಕೊಪ್ಪ,ತೃತೀಯ ಸ್ಥಾನ ಸಂಗೀತ ಹಿರೇಮಠ,ಸಿ.ಇ.ಎಸ್.ಎಸ್.ಸಂ.ಪ.ಪೂ.ಕಾಲೇಜ್,ಮಿಶ್ರಿಕೋಟಿ ಪಡೆದುಕೊಂಡರು.ಪ್ರಬಂಧ ಸ್ಪರ್ಧೆ (ಇಂಗ್ಲೀಷ್) ಯಲ್ಲಿ
ಪ್ರಥಮ ಸ್ಥಾನ ವಿಠ್ಠಲ ದರೇಣ್ಣವರ, ಸರಕಾರಿ ವಿಜ್ಞಾನ ಪ.ಪೂ.ಕಾಲೇಜ್, ಕಲಘಟಗಿ,ದ್ವಿತೀಯ ಸ್ಥಾನ ಪೂಜಾ ಬಾಳಿಕಾಯಿ,ಸರಕಾರಿ ವಿಜ್ಞಾನ ಪ.ಪೂ.ಕಾಲೇಜ್ ಕಲಘಟಗಿ ಪಡೆದುಕೊಂಡರು.
ರಸ ಪ್ರಶ್ನೆಯಲ್ಲಿ ಗುಡ್ ನ್ಯೂಜ್ ಪ.ಪೂ.ಕಾಲೇಜ್ ತಂಡದ ಶೋಭಾ ಬೊಳಣ್ಣವರ, ಶೀಲಾ ಕಂದ್ಲಿ ಪ್ರಥಮ ಸ್ಥಾನ,ದ್ವಿತೀಯ ಸ್ಥಾನ ಸರಕಾರಿ ಪ.ಪೂ.ಕಾಲೇಜ್, ಸಂಗಮೇಶ್ವರದ ಪುಷ್ಪಾ ಖಾನಕಾತ್ರಿ ನೇತ್ರಾವತಿ ನೆಸ್ರೆಕರ ಹಾಗೂ ತೃತೀಯ ಸ್ಥಾನ ಸರಕಾರಿ ವಿಜ್ಞಾನ ಪ.ಪೂ.ಕಾಲೇಜ್, ಕಲಘಟಗಿಯ ವೀರಭದ್ರಯ್ಯ ಪೂಜಾರ ಅನಿಲ ತೊಳಲಿ ಪಡೆದರು.
ಆಡಳಿತಾಧಿಕಾರಿ ನಿಜು ಥಾಮಸ್,ಪ್ರಾಚಾರ್ಯರಾದ ಶ್ರೀಮತಿ ಜಿ.ಪಿ.ಕಮಲಾ, ಮೋಹನ ಕಳಸೂರ ಉಪಸ್ಥಿತರಿದ್ದರು.
Kshetra Samachara
17/12/2020 03:56 pm