ಧಾರವಾಡ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರ ಸೇವಾ ಭದ್ರತೆ ಮುಂದುವರೆಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದಿಂದ ನಗರದ ಜಿಲ್ಲಾಧಿಕಾರಿ ಕಚೇರಿಯ ಕಾಂಪೌಂಡ್ ಆವರಣದಲ್ಲಿ ಗಾಂಧೀಜಿ ಪುತ್ಥಳಿ ಮುಂದೆ ಅತಿಥಿ ಉಪನ್ಯಾಸಕರು ಅನಿರ್ದಿಷ್ಟಾವಧಿ ಧರಣಿ ಕೈಗೊಂಡರು.
ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಪ್ರೊ. ಹನುಮಂತಗೌಡ ಕಲ್ಮನಿ ನೇತೃತ್ವದಲ್ಲಿ ಶುಕ್ರವಾರ ಧರಣಿ ಕೈಗೊಂಡ ಅತಿಥಿ ಉಪನ್ಯಾಸಕರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರಕಾರವು ಕಳೆದ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ನೀಡಿದ ಭರವಸೆಯಂತೆ ಗೌರವ ಹೆಚ್ಚಳ ಮಾಡಿ, 2019-20ರಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವವರನ್ನೇ ಪ್ರಸಕ್ತ ಸಾಲಿಗೆ ತಕ್ಷಣವೇ ಮುಂದುವರಿಸಬೇಕು.ಈ ಕೋವಿಡ್ ವರ್ಷವನ್ನು ಸೇವಾವಧಿಯನ್ನಾಗಿ ಪರಿಗಣಿಸುವಂತೆ ಆದೇಶ ಹೊರಡಿಸಬೇಕು, ಅತಿಥಿ ಉಪನ್ಯಾಸಕರ ಬೇಡಿಕೆಗಳು ಈಡೇರಿಕೆಗಾಗಿಯೇ ಈ ಧರಣಿ ನಿರಂತರವಾಗಿ ನಡೆಯಲಿದೆ ಎಂದು ಘೋಷಣೆ ಕೂಗಿದರು.
Kshetra Samachara
11/12/2020 06:13 pm