ಹುಬ್ಬಳ್ಳಿ: ಸರ್ಕಾರದ ನಿಯಮಾನುಸಾರ ಅನುಮತಿ ಪಡೆಯದೇ ಶಾಲೆಯನ್ನು ಪ್ರಾರಂಭಿಸಿರುವ, ಹುಬ್ಬಳ್ಳಿ ಲೋಹಿಯಾ ನಗರದ ರೇಣುಕಾ ಎಜ್ಯುಕೇಶನ್ ಟ್ರಸ್ಟ್ ರೇಣುಕಾ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಕಾರವಾರ ರಸ್ತೆ ಅಪ್ಪಾ ಎಜ್ಯುಕೇಶನ್ ಸೊಸೈಟಿ ಅಪ್ಪಾ ಕಿರಿಯ ಪ್ರಾಥಮಿಕ ಶಾಲೆ ನೋಂದಣಿಯನ್ನು ರದ್ದುಗೊಳಿಸಿ, ಸಾರ್ವಜನಿಕ ಶಿಕ್ಷಣ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಸದರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಪಾಲಕರು ಮಕ್ಕಳನ್ನು 2020-21ನೇ ಸಾಲಿಗೆ ಸಮೀಪದ ಸರಕಾರಿ, ಅನುದಾನಿತ ಅಥವಾ ಅನುದಾನರಹಿತ ಶಾಲೆಗಳಿಗೆ ದಾಖಲು ಮಾಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಶೈಲಕರಿಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
04/12/2020 07:15 pm