ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ದಿನೆ ದಿನೆ ಹೆಚ್ಚುತ್ತಿದೆ ಹಾಜರಾತಿ ಸಂಖ್ಯೆ- ಬಸ್ ಪಾಸ್ ಗೆ ಮನವಿ ಮಾಡಿಕೊಂಡ ವಿದ್ಯಾರ್ಥಿಗಳು

ವರದಿ : ಈರಣ್ಣ ವಾಲಿಕಾರ

ಹುಬ್ಬಳ್ಳಿ- ಕೊರೊನಾ ಹಾವಳಿಯಂದ ಕಳೆದ ಏಳೆಂಟು ತಿಂಗಳಿನಿಂದ ಬಂದ್ ಆಗಿದ್ದ ಕಾಲೇಜುಗಳು, ಈಗ ಪದವಿಪೂರ್ವ ಮತ್ತು ಸ್ನಾತಕೋತ್ತರ ಕಾಲೇಜು ಆರಂಭಕ್ಕೆ, ರಾಜ್ಯ ಸರಕಾರ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, ನಗರದ ಬಹುತೇಕ ಕಾಲೇಜುಗಳು ಆರಂಭಗೊಂಡಿದ್ದು, ಹಂತಹಂತವಾಗಿ ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾಗುತ್ತಿದ್ದಾರೆ ...

ದೇಶದಲ್ಲಿ ಕೊವಿಡ್ 19 ಅಬ್ಬರಕ್ಕೆ ಎಲ್ಲಾ ಕ್ಷೇತ್ರಗಳು ಸ್ಥಗಿತಗೊಂಡಿದ್ದವು, ಅದರಂತೆ ಕಾಲೇಜು ಕೂಡ ಹೊರತಾಗಿಲ್ಲ, ಇನ್ನೂ ರಾಜ್ಯದಲ್ಲಿ ಕೊರೊನಾ ಹಾವಳಿ ದಿನದಿಂದ ತಗ್ಗುತ್ತಿರುವುದರಿಂದ, ರಾಜ್ಯ ಸರಕಾರ ಅಧಿಕಾರಿಗಳ ಜೊತೆ ಚರ್ಚಿಸಿ, ನವಂಬರ್ 17 ರಿಂದ ಕಾಲೇಜು ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಅದರಂತೆ ಕಾಲೇಜು ಆಡಳಿತ ಮಂಡಳಿ, ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು , ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಮಾಸ್ಕ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ತಪಾಸಣೆ ಮತ್ತು ಕೊರೊನಾ ಟೆಸ್ಟ್ ಮಾಡಲು ಸಿದ್ಧತೆ ನಡೆಸಿವೆ....

ಆನ್ಲೈನ್ ಕ್ಲಾಸ್ ಗಳು ವಿದ್ಯಾರ್ಥಿಗಳಿಗೆ, ಸರಿಯಾಗಿ ಕಲಿಕೆಯ ಸ್ಥಾನವಾಗಿರಲಿಲ್ಲ. ಈಗ ಮತ್ತೆ ಆಪಲೈನ್ ಕ್ಲಾಸ್ ಆರಂಭವಾಗುತ್ತಿದ್ದಂತೆ, ವಿದ್ಯಾರ್ಥಿಗಳಿಗೆ ಸಂತಸಗೊಂಡಿದ್ದಾರೆ. ಆದರೆ ಲಾಕ್ ಡೌನ್ ಪರಿಣಾಮ ಅದೆಷ್ಟೋ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ , ಹಳ್ಳಿಯಿಂದ ಬರುವ ವಿಧ್ಯಾರ್ಥಿಗಳಿಗೆ ಸರಕಾರ ಆದಷ್ಟು ಬಸ್ ಪಾಸ್ ವ್ಯವಸ್ಥೆ ಮಾಡಿಕೊಡಬೇಕು ಎಂದು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.

ಒಟ್ಟಿನಲ್ಲಿ ನಿನ್ನೆಯಿಂದ ಪ್ರಾರಂಭವಾದ ಕಾಲೇಜುಗಳು, ಕ್ರಮೇಣವಾಗಿ ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಿದ್ದಾರೆ. ಸರ್ಕಾರ ಆದಷ್ಟು ಬೇಗ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವ್ಯವಸ್ಥೆ ಮಾಡಿದರೆ. ಎಲ್ಲ ವಿದ್ಯಾರ್ಥಿಗಳು ಕಾಲೇಜುಗೆ ಬರುವ ಸಂದರ್ಭವಿದೆ.....!

Edited By : Nagesh Gaonkar
Kshetra Samachara

Kshetra Samachara

19/11/2020 08:26 am

Cinque Terre

32.17 K

Cinque Terre

10

ಸಂಬಂಧಿತ ಸುದ್ದಿ