ಹುಬ್ಬಳ್ಳಿ : ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹುಬ್ಬಳ್ಳಿ ತಾಲೂಕು ಮಟ್ಟದಲ್ಲಿ ಅತಿ ಹೆಚ್ಚು ಅಂಕ ಪಡೆದ ನವನಗರ ಸರಕಾರಿ ಪ್ರೌಢ ಶಾಲೆ ಪವಿತ್ರಾ ಮೂಡಲವರ, ಅದರಗುಂಚಿ ಸರಕಾರಿ ಪ್ರೌಢ ಶಾಲೆ ವೈಷ್ಣವಿ ದಾನಪ್ಪಗೌಡ್ರ, ಕಿರೇಸೂರ ಸರಕಾರಿ ಪ್ರೌಢ ಶಾಲೆ ಸುಷ್ಮಾ ಹೂಲಿಕಟ್ಟಿ ಇವರಿಗೆ ಉಚಿತ ಲ್ಯಾಪ್ ಟಾಪ್ ವಿತರಣೆ ಮಾಡಲಾಯಿತು.
ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ತಾ.ಪಂ.ಇಓ ಗಂಗಾಧರ ಕುಂದಕೋರ ಲ್ಯಾಪ್ ಟಾಪ್ ಗಳನ್ನು ವಿತರಿಸಿದರು.
ನಂತರ ಮಾತನಾಡದ ಅವರು ವಿದ್ಯಾರ್ಥಿಗಳು ಸರಕಾರದ ಸೌಲಭ್ಯಗಳನ್ನು ಸಮರ್ಪಕ ಬಳಸಿಕೊಂಡು ಯಶಸ್ಸು ಗಳಿಸುವಂತೆ ಹೇಳಿದರು.
Kshetra Samachara
12/11/2020 06:37 pm